ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ, ರಾಜಕೀಯ ಲೇಪ ನೀಡಲಾಗಿದೆ: ಶಾಸಕ ಯತ್ನಾಳ್

Prasthutha|

ಬೆಳಗಾವಿ: ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಅದಕ್ಕೆ ರಾಜಕೀಯ ಲೇಪ ಬಳೆದು ಮಾಧ್ಯಮಗಳು ಬೇರೆ ಏನೋ ಅರ್ಥ ಬರುವಂತೆ ವರದಿ ಮಾಡಿದ್ದಾರೆ. ಇವೆಲ್ಲ ಶುದ್ಧ ಸುಳ್ಳಾಗಿದ್ದು, ಈ ರೀತಿಯಾದ ವದಂತಿಗಳಿಗೆ ಕಿವಿಗೊಡಬಾರದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದಾರೆ.

- Advertisement -

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ದಾವಣಗೆರೆಯಲ್ಲಿ ಮಾಧ್ಯಮಗಳನ್ನುದ್ದೇಸಿ ಮಾತನಾಡುವಾಗ ಕಾಂಗ್ರೆಸ್ ನಲ್ಲಿರುವ ಒಳಕಿತ್ತಾಟದಿಂದ ಸಿದ್ದರಾಮಯ್ಯ ನವರನ್ನು ಮುಖ್ಯ ಮಂತ್ರಿ ಸ್ಥಾನದಿಂದ ಇಳಿಸಿ, ಬೇರೆ ಆಕಾಂಕ್ಷಿಗಳು ಮುಖ್ಯ ಮಂತ್ರಿಗಳಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿದೆ. ಆದರೆ, ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಅದಕ್ಕೆ ರಾಜಕೀಯ ಲೇಪ ಬಳೆದು ಮಾಧ್ಯಮಗಳು ಬೇರೆ ಏನೋ ಅರ್ಥ ಬರುವಂತೆ ವರದಿ ಮಾಡಿದ್ದಾರೆ. ಇವೆಲ್ಲ ಶುದ್ಧ ಸುಳ್ಳಾಗಿದ್ದು, ಈ ರೀತಿಯಾದ ವದಂತಿಗಳಿಗೆ ಕಿವಿಗೊಡಬಾರದೆಂದು ಮನವಿ ಮಾಡುತ್ತೇನೆಂದು ಹೇಳಿದ್ದಾರೆ.

ಕದ್ದು-ಮುಚ್ಚಿ ಸಭೆ ನಡೆಸುತ್ತಿರುವ ಕಾಂಗ್ರೆಸ್ ನ ಪ್ರಭಾವಿ ಸಚಿವರು ತಮ್ಮ ಸಭೆಯಲ್ಲಿ ಏನು ಚರ್ಚೆಯಾಯಿತು ಎಂಬುದನ್ನು ಮೊದಲು ಜನತೆಗೆ ತಿಳಿಸಲಿ. ಬೆಂಗಳೂರಿನಲ್ಲಿ ಪಾಕ್ ಪ್ರಜೆಗಳು ನಕಲಿ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಪಡೆದು ಅಪಾರ್ಟ್ಮೆಂಟ್ ಒಂದರಲ್ಲಿ ನೆಲೆಸಿದ್ದರೂ ಪತ್ತೆಹಚ್ಚಳ್ಳು ವಿಫಲರಾದ ಪೊಲೀಸ್ ಇಲಾಖೆ ಜಾಲತಾಣಗಳಲ್ಲಿ ಯಾರು ಸರ್ಕಾರದ ವಿರುದ್ಧ ಬರೆದರು ಎಂಬುದನ್ನು ಗಮನಿಸುವಲ್ಲಿ ನಿರತರಾಗಿದ್ದಾರೆ. ನನ್ನನ್ನು ದೂಷಿಸಿ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಡುವುದು ಇವರ ತಂತ್ರಗಾರಿಕೆ ಆಗಿದೆ. ಇವೆಲ್ಲ ಷಡ್ಯಂತ್ರಗಳನ್ನು, ಊಹಾ ಪೋಹಗಳನ್ನು, ತಪ್ಪು ವರದಿಗಳನ್ನು ನಂಬಬಾರದು ಮತೊಮ್ಮೆ ನಿಮಗೆ ಮನವರಿಕೆ ಮಾಡಿಕೊಳ್ಳುತ್ತೇನೆಂದು ತಿಳಿಸಿದ್ದಾರೆ.

- Advertisement -

ಇತ್ತೀಚೆಗೆ ದಾವಣಗೆರೆಯಲ್ಲಿ ಹೇಳಿಕೆ ನೀಡಿದ್ದ ಯತ್ನಾಳ್ ಅವರು “ಕಾಂಗ್ರೆಸ್‌ ಸರಕಾರವನ್ನು ಕೆಡವಲು ಬಿಜೆಪಿ 1200 ಕೋಟಿ ರೂಪಾಯಿಗಳನ್ನು ಎತ್ತಿಟ್ಟಿದೆ ಎಂದು ಹೇಳಿದ್ದರು. ಬಿಜೆಪಿ ನಾಯಕರು ಈ ಹೇಳಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದರು.



Join Whatsapp