ಸಿಎಂ ಪತ್ನಿ ಹೆಸರಿನ 14 ನಿವೇಶನಗಳ ಕ್ರಯಪತ್ರ ರದ್ದತಿಗೆ ಮುಡಾ ಆಯುಕ್ತರಿಂದ ಆದೇಶ

Prasthutha|

- Advertisement -

ಮೈಸೂರು: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ(ಮುಡಾ) ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ, ಮೈಸೂರಿನ ವಿಜಯನಗರದ ಮೂರನೇ ಹಂತದಲ್ಲಿ ಪಡೆದ 14 ನಿವೇಶನಗಳನ್ನು ವಾಪಾಸ್‌ ನೀಡಿದ ಬೆನ್ನಲ್ಲೇ, ನಿವೇಶನಗಳ ಕ್ರಯಪತ್ರವನ್ನು ರದ್ದುಗೊಳಿಸುವಂತೆ ಮುಡಾ ಆಯುಕ್ತ ರಘುನಂದನ್​,​ ಸಬ್​​ರಿಜಿಸ್ಟರ್​​ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಮುಡಾದಲ್ಲಿ ಪಾರ್ವತಿ 50:50ರಂತೆ ಪಡೆದ ನಿವೇಶನಗಳನ್ನು ಹಿಂದಿರುಗಿಸಿ, ಸೋಮವಾರ ಮುಡಾ ಆಯುಕ್ತರಿಗೆ ಪತ್ರ ಬರೆದಿದ್ದರು. ಈ ಪತ್ರವನ್ನು ಮಂಗಳವಾರ ಬೆಳಗ್ಗೆ ಅವರ ಪುತ್ರ ಹಾಗು ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಮುಡಾ ಆಯುಕ್ತರಿಗೆ ನೀಡಿದ್ದರು.

- Advertisement -

ಈ ಬಗ್ಗೆ ಪ್ರಾಧಿಕಾರದ ಆಯುಕ್ತ ರಘುನಂದನ್‌ ಮಾತನಾಡಿ, “ಯಾರೇ ನಿವೇಶನವನ್ನು ವಾಪಸ್‌ ನೀಡಿದರೂ ಹಿಂಪಡೆಯುತ್ತೇವೆ. ಅದರ ಆಧಾರದಲ್ಲಿ ಇಂದು ಪಾರ್ವತಿಯವರು ಮುಡಾಗೆ ವಾಪಸ್‌ ನೀಡಿರುವ ನಿವೇಶನಗಳನ್ನು ಹಿಂಪಡೆದು ಅವರ 14 ನಿವೇಶನಗಳ ಕ್ರಯಪತ್ರವನ್ನು ರದ್ದುಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ” ಎಂದು ತಿಳಿಸಿದರು.



Join Whatsapp