ವಿಮಾನ ಪತನಗೊಂಡ 56 ವರ್ಷಗಳ ಬಳಿಕ ನಾಲ್ಕು ಮೃತದೇಹಗಳು ಪತ್ತೆ..!

Prasthutha|

ನವದೆಹಲಿ: 56 ವರ್ಷಗಳ ಹಿಂದೆ ವಿಮಾನ ಅಪಘಾತವೊಂದರಲ್ಲಿ ನಾಪತ್ತೆಯಾಗಿದ್ದ ನಾಲ್ಕು ಮೃತ ದೇಹಗಳು ಪತ್ತೆಯಾಗಿದೆ.

- Advertisement -

ಇದೀಗ ಹಿಮಭರಿತ ಭೂಪ್ರದೇಶದಲ್ಲಿ ಹುದುಗಿಹೋಗಿದ್ದ ವಿಮಾನದ ಅವಶೇಷಗಳು ದೊರೆತಿದ್ದು, ಪತ್ತೆಯಾದ ಮೃತ ದೇಹಗಳಲ್ಲಿ ಮೂವರ ಗುರುತನ್ನು ಪತ್ತೆ ಹಚ್ಚಲಾಗಿದ್ದು, ಸೇನೆಯ ವಿವಿಧ ವಲಯದಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಸೈನಿಕರು ಎಂದು ಗುರುತಿಸಲಾಗಿದೆ.

ನಾಲ್ಕು ಶವಗಳ ಪೈಕಿ ಮೂರು ಮೃತದೇಹಗಳು ಮಲ್ಖಾನ್ ಸಿಂಗ್, ಸಿಪಾಯಿ ನಾರಾಯಣ್ ಸಿಂಗ್ ಮತ್ತು ಕುಶಲಕರ್ಮಿ ಥಾಮಸ್ ಚರಣ್ ಅವರದ್ದಾಗಿದೆ ಹಾಗೂ ಉಳಿದೊಂದು ಮೃತ ದೇಹದಿಂದ ವಶಪಡಿಸಿಕೊಂಡ ದಾಖಲೆಗಳು ವ್ಯಕ್ತಿಯನ್ನು ನಿರ್ಣಾಯಕವಾಗಿ ಗುರುತಿಸಿಲ್ಲ. ಆದರೆ, ಅವರ ಸಂಬಂಧಿಕರ ವಿವರಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಈ ಕುರಿತು ಸೇನಾ ಅಧಿಕಾರಿಗಳು ಮಾತನಾಡಿ, ಭಾರತೀಯ ಸೇನೆಯ ಡೋಗ್ರಾ ಸ್ಕೌಟ್ಸ್ ಮತ್ತು ತಿರಂಗಾ ಮೌಂಟೇನ್ ರೆಸ್ಕ್ಯೂ ಸಿಬ್ಬಂದಿಯನ್ನು ಒಳಗೊಂಡ ಜಂಟಿ ತಂಡವು ಕಾರ್ಯಾಚರಣೆಯನ್ನು ನಡೆಸಿದೆ. ಇದರಲ್ಲಿ 4 ಶವಗಳನ್ನು ಪತ್ತೆ ಮಾಡಿದೆ. ಸಿಬ್ಬಂದಿಗಳಿಂದ ನಡೆಸಲಾದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ ಎಂದು ತಿಳಿಸಿದ್ದಾರೆ.



Join Whatsapp