ಪ್ರಜ್ವಲ್ ಪ್ರಕರಣಕ್ಕೆ ಭವಾನಿಯನ್ನು ಎಳೆದು ತಂದಾಗ ಸರಿ ಅನ್ನಿಸಿತ್ತಾ: ಕಾಂಗ್ರೆಸ್ ಗೆ ಅಶೋಕ್ ಪ್ರಶ್ನೆ

Prasthutha|

ಬೆಂಗಳೂರು: ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಭವಾನಿ ರೇವಣ್ಣ ಅವರನ್ನು ಎಳೆದು ತಂದಿದ್ದು ಸರಿಯೇ ಎಂದು ಪ್ರತಿಪಕ್ಷದ ನಾಯಕ ಆರ್ ಅಶೋಕ್ ಅವರು ಕಾಂಗ್ರೆಸ್ ನಾಯಕರಿಗೆ ಪ್ರಶ್ನೆ ಮಾಡಿದ್ದಾರೆ.

- Advertisement -


ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಬರೆದ ಪತ್ರವನ್ನು ಉಲ್ಲೇಖಿಸಿ ಕಾಂಗ್ರೆಸ್ ಮಾಡುತ್ತಿರುವ ಟೀಕೆಗೆ ಪ್ರತಿಕ್ರಿಯಿಸಿ, ನಾನು ಸಿಎಂ ಪತ್ನಿಯವರ ಪತ್ರ ನೋಡಿದ್ದೇನೆ. ಯಾರೂ ಸಹ ಸುಖಾಸುಮ್ಮನೇ ಕುಟುಂಬದ ಹೆಸರನ್ನು ತರಬಾರದು. ಆದರೆ ಕಾಂಗ್ರೆಸ್ ಭವಾನಿ ರೇವಣ್ಣ ಹೆಸರು ತಂದಿದ್ದರು. ಆಗ ಅವರಿಗೆ ಅದು ಸರಿ ಅನ್ನಿಸಿತ್ತಾ ಎಂದು ಮರು ಪ್ರಶ್ನೆ ಹಾಕಿ ತಿರುಗೇಟು ನೀಡಿದರು.


ಸೈಟ್ ವಾಪಸ್ ಕೊಟ್ಟಿದ್ದು ತುಂಬಾ ತಡವಾಗಿದೆ. ಇಷ್ಟು ದಿನ ನಾನು ತಪ್ಪೇ ಮಾಡಿಲ್ಲ ಎನ್ನುತ್ತಿದ್ದರು. ಈಗ ಯೂ ಟರ್ನ್ ಹೊಡೆದು ಸೈಟ್ ವಾಪಸ್ ನೀಡಿದ್ದಾರೆ. ರಾಜ್ಯದ ಜನತೆಗೆ ಈಗ ಎಲ್ಲವೂ ಅರ್ಥವಾಗಿದೆ ಎಂದು ಹೇಳಿದರು.

- Advertisement -


ಮೂಡಾ ಕೇಸ್ ಹಾಕಿದ್ದು ರಾಜಕೀಯ ಪಕ್ಷಗಳಲ್ಲ. ಮೂಡಾ ಅಕ್ರಮದ ಬಗ್ಗೆ ಮೊದಲು ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಕಟವಾಗಿತ್ತು. ತಪ್ಪು ಮಾಡಿಲ್ಲ ಅಂದಮೇಲೆ ಯಾಕೆ ಸೈಟ್ ವಾಪಸ್ ಕೊಟ್ಟಿದ್ದೀರಿ. ಸೈಟ್ ಇಟ್ಟುಕೊಂಡು ಕಾನೂನು ಹೋರಾಟ ಎದುರಿಸಬೇಕಿತ್ತು ಎಂದು ತಿಳಿಸಿದರು.



Join Whatsapp