ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ತಡರಾತ್ರಿ ಹೊಟ್ಟೆನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆ ಅವರನ್ನು ತಕ್ಷಣವೇ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಈ ವೇಳೆ ಅವರ ಹೃದಯ ಪರೀಕ್ಷೆ ಕೂಡ ಮಾಡಿಸಲಾಗಿದೆ. ಹೃದಯರೋಗ ತಜ್ಞ ಸಾಯಿ ಸತೀಶ್ ಅವರು ರಜನಿ ಅವರನ್ನು ಪರೀಕ್ಷೆ ಮಾಡಿದ್ದಾರೆ.
ಈಗ ರಜನಿಕಾಂತ್ ಆರೋಗ್ಯ ಸುಸ್ಥಿರವಾಗಿದೆ.
ಇಂದು (ಅಕ್ಟೋಬರ್ 1) ಅಪೋಲೋ ಆಸ್ಪತ್ರೆಯಲ್ಲಿ ರಜನಿಕಾಂತ್ ಅವರ ಹೃದಯದ ಪರೀಕ್ಷೆ ನಡೆಯಲಿದೆ. ಈ ವೇಳೆ ಕೆಲವು ಚಿಕಿತ್ಸೆಗಳನ್ನು ರಜನಿಕಾಂತ್ಗೆ ನೀಡಲಾಗುತ್ತಿದೆ ಎನ್ನಲಾಗಿದೆ. ಸದ್ಯ ರಜನಿಕಾಂತ್ ಫ್ಯಾನ್ಸ್ ಸಾಕಷ್ಟು ಆತಂಕಗೊಂಡಿದ್ದಾರೆ. ಅವರ ಕಡೆಯಿಂದ ಆರೋಗ್ಯದ ಬಗ್ಗೆ ಅಪ್ಡೇಟ್ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ರಜನಿಕಾಂತ್ ನಟನೆಯ ‘ವೆಟ್ಟೈಯಾನ್’ ಸಿನಿಮಾ ಅಕ್ಟೋಬರ್ 10ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾಗಾಗಿ ಫ್ಯಾನ್ಸ್ ಕಾದಿದ್ದಾರೆ. ರಜನಿಕಾಂತ್ ಅಮಿತಾಭ್ ಬಚ್ಚನ್, ಫಹಾದ್ ಫಾಸಿಲ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ