ಸಿದ್ದರಾಮಯ್ಯ ನನ್ನ ಮನೆದೇವರು, ಅವರಿಗೆ ದ್ರೋಹ ಮಾಡಿಲ್ಲ: ಮುಡಾ ಅಧ್ಯಕ್ಷ ಮರೀಗೌಡ

Prasthutha|

ಮೈಸೂರು: ಸಿದ್ದರಾಮಯ್ಯ ನನ್ನ ಮನೆದೇವರು. ಎಂದಿಗೂ ಅವರು ಹಾಗೂ ಅವರ ಕುಟುಂಬಕ್ಕೆ ದ್ರೋಹ ಬಗೆಯುವ ಕೆಲಸ ಮಾಡುವುದಿಲ್ಲ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ಮರೀಗೌಡ ಹೇಳಿದ್ದಾರೆ.

- Advertisement -


‘ ಸಿದ್ದರಾಮಯ್ಯರ ಇಂದಿನ ಸ್ಥಿತಿಗೆ ನಾನೇ ಕಾರಣ ಎಂದು ಆರೋಪಿಸಿ ಕಾಂಗ್ರೆಸ್ ನ ಕೆಲ ಕಾರ್ಯಕರ್ತರು ಕಳೆದ ಶುಕ್ರವಾರ ಮೈಸೂರು ವಿಮಾನ ನಿಲ್ದಾಣದಲ್ಲಿ ನನ್ನ ಮೇಲೆ ಹಲ್ಲೆಗೆ ಯತ್ನಿಸಿದರು. ಸ್ವಪಕ್ಷೀಯರ ಈ ಗಲಾಟೆ ತೀವ್ರ ನೋವು ತಂದಿದೆ’ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.


‘ 50:50 ನಿವೇಶನಗಳ ಹಂಚಿಕೆ ಆಗಿರುವುದು 2020ರಿಂದ. ನಾನು ಮುಡಾ ಅಧ್ಯಕ್ಷ ಆಗಿದ್ದು 2024ರ ಮಾರ್ಚ್ 1ರಿಂದ. ಹೀಗಾಗಿ ಹಿಂದಿನ ಪ್ರಕರಣಗಳಿಗೂ ನನಗೂ ಸಂಬಂಧ ಇಲ್ಲ’ ಎಂದರು.
‘ ಸದ್ಯಕ್ಕೆ ರಾಜೀನಾಮೆ ಕೊಡುವ ಯೋಚನೆ ಇಲ್ಲ. ಸಿದ್ದರಾಮಯ್ಯ ಅವರೇ ನನ್ನ ಹೈಕಮಾಂಡ್. ಅವರು ಸೂಚಿಸಿದರೆ ರಾಜೀನಾಮೆಗೂ ಸಿದ್ದನಿದ್ದೇನೆ’ ಎಂದರು.

- Advertisement -


‘ ನಿನ್ನ ಕಾಲದಲ್ಲಿ ಏನು ಆಗಿಲ್ಲ ಬಿಡು ಎಂದು ಸ್ವತಃ ಸಿದ್ದರಾಮಯ್ಯ ಅವರೇ ನನಗೆ ಸಮಾಧಾನ ಮಾಡಿದ್ದಾರೆ. ಸ್ವಪಕ್ಷೀಯರು ನನ್ನ ತೇಜೋವಧೆ ಮಾಡುವುದನ್ನು ಇನ್ನಾದರೂ ಬಿಡಬೇಕು. ಸಮುದಾಯದ ಮುಖಂಡರು ನನ್ನ ಮೇಲಿರುವ ತಪ್ಪು ಕಲ್ಪನೆಯನ್ನು ಬಿಡಬೇಕು’ ಎಂದು ಮನವಿ ಮಾಡಿದರು.



Join Whatsapp