ತಾಯಿಯನ್ನು ಮರಕ್ಕೆ ಕಟ್ಟಿ ಜೀವಂತ ಸುಟ್ಟು ಹಾಕಿದ ಕ್ರೂರ ಮಕ್ಕಳು..!

Prasthutha|

ತ್ರಿಪುರಾ: ಸಂಬಂಧಗಳ ಬೆಲೆ ಅರಿಯದ ಮಕ್ಕಳು ತಾಯಿಯನ್ನು ಮರಕ್ಕೆ ಕಟ್ಟಿಹಾಕಿ ಸಜೀವವಾಗಿ ದಹಿಸಿರುವ ಘಟನೆ ಪಶ್ಚಿಮ ತ್ರಿಪುರಾದಲ್ಲಿ ನಡೆದಿದೆ.

- Advertisement -

62 ವರ್ಷದ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಇಬ್ಬರು ಪುತ್ರರು ಜೀವಂತವಾಗಿ ಸುಟ್ಟುಹಾಕಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪುತ್ರರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದು, ಕೌಟುಂಬಿಕ ಕಲಹವೇ ಭೀಕರ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಚಂಪಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಖಮರ್ಬರಿಯಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

- Advertisement -

ಮಹಿಳೆ ಸುಮಾರು ಒಂದೂವರೆ ವರ್ಷದ ಹಿಂದೆ ಪತಿಯನ್ನು ಕಳೆದುಕೊಂಡ ನಂತರ ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಆಕೆಯ ಇನ್ನೊಬ್ಬ ಮಗ ಅಗರ್ತಲಾದಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ.



Join Whatsapp