ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2024ರ ಟಿಕೆಟ್ ಮಾರಾಟ ಶನಿವಾರದಿಂದ (ಸೆ.28) ಆರಂಭವಾಗಲಿದೆ.
ಎರಡು ರೀತಿಯ ಟಿಕೆಟ್ಗಳಿವೆ. ಗೋಲ್ಡ್ ಕಾರ್ಡ್ ಮತ್ತು ಸಾಮಾನ್ಯ ಟಿಕೆಟ್. ಈ ಎರಡವುಗಳನ್ನು ಆನ್ ಲೈನ್ ಮೂಲಕ ಕೊಂಡುಕೊಳ್ಳಬಹುದಾಗಿದೆ.
ಸೆಪ್ಟೆಂಬರ್ 30ರವರೆಗೆ ಮಾತ್ರ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್ ಮಾರಾಟ ಮಾಡಲಾಗುತ್ತದೆ ಎಂದು ದಸರಾ ವಿಶೇಷ ಅಧಿಕಾರಿ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಮಾಹಿತಿ ನೀಡಿದರು.
ದಸರಾ ಮತ್ತು ಯುವ ದಸರಾಗೆ ಟಿಕೆಟ್ ಮಾರಾಟ ಸೆ.28ರಿಂದ ಆರಂಭವಾಗಲಿದೆ. ಪ್ರತಿನಿತ್ಯ 1 ಸಾವಿರದಿಂದ 1500 ಗೋಲ್ಡ್ ಕಾರ್ಡ್ಗಳನ್ನು ಮರಾಟ ಮಾಡಲಾಗುತ್ತದೆ. ಒಂದು ದಸರಾ ಗೋಲ್ಡ್ ಕಾರ್ಡ್ಗೆ 6,500 ರೂಪಾಯಿ ನಿಗದಿ ಮಾಡಲಾಗಿದೆ. ಒಂದು ದಸರಾ ಗೋಲ್ಡ್ ಕಾರ್ಡ್ನಲ್ಲಿ ಜಂಬೂಸವಾರಿ ಮೆರವಣಿಗೆ, ಪಂಜಿನ ಕವಾಯತು, ಚಾಮುಂಡಿಬೆಟ್ಟ, ಅರಮನೆ, ಚಾಮರಾಜೇಂದ್ರ ಮೃಗಾಲಯ ವೀಕ್ಷಣೆಗೆ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಅರಮನೆ ಆವರಣದಲ್ಲಿ ಜಂಬೂಸವಾರಿ ವೀಕ್ಷಣೆಗೆ 3,500 ರೂ. ಬೆಲೆಯ ಟಿಕೆಟ್ ಲಭ್ಯವಿದೆ. ಇನ್ನು, ಕೇವಲ ಪಂಜಿನ ಕವಾಯತು ವೀಕ್ಷಣೆಗೆ 1,000 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ.
ಟಿಕೆಟ್ ಖರೀದಿ ಹೇಗೆ?
ಮೈಸೂರು ದಸರಾ ಅಧಿಕೃತ ವೆಬ್ಸೈಟ್ https://www.mysoredasara.gov.in ಗೆ ಭೇಟಿ ನೀಡಿ.