ಬೈಂದೂರು: ಕೆರೆಯಲ್ಲಿ ಈಜಲು ಹೋದ ವಿದ್ಯಾರ್ಥಿಗಳಿಬ್ಬರು ಮೃತ್ಯು

Prasthutha|

- Advertisement -

ಬೈಂದೂರು: ಕೆರೆಯಲ್ಲಿ ಈಜಲು ಹೋದ ವಿದ್ಯಾರ್ಥಿಗಳಿಬ್ಬರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಬೈಂದೂರಿನಲ್ಲಿ ನಡೆದಿದೆ.

ಮೃತಪಟ್ಟ ಬಾಲಕರು ಬೈಂದೂರು ಯೋಜನಾನಗರದ ನಾಗೇಂದ್ರ (13) ಹಾಗೂ ರೈಲ್ವೆ ನಿಲ್ದಾಣದ ಬಳಿಯ ಶಾನು ಮೊಹಮದ್ ಸಫಾನ್ (13) ಎಂದು ಗುರುತಿಸಲಾಗಿದೆ.

- Advertisement -

ಬಾಲಕರು ಪರೀಕ್ಷೆ ಮುಗಿಸಿ ಮನೆಯಲ್ಲಿ ಊಟ ಮಾಡಿ ಇಬ್ಬರು ಬೈಂದೂರು ನಗರ ಸಮೀಪದ ಕೆರೆಕಟ್ಟೆ ಕೆರೆಯಲ್ಲಿ ಈಜಲು ತೆರಳಿದ್ದರು.
ಸರಿಯಾಗಿ ಈಜಲು ಬಾರದ ಇವರು ಮಳೆಯಲ್ಲಿ ಆಟವಾಡಲು ನೀರಿಗೆ ಇಳಿದಿದ್ದಾರೆ.

ಬಾಲಕರು ಸಂಜೆ ವರಗೂ ಮನೆಗೆ ಬಾರದಿರುವ ಕಾರಣ ಬೈಂದೂರು ಠಾಣೆಯಲ್ಲಿ ಪೋಷಕರು ದೂರು ನೀಡಿದ್ದು, ಬಳಿಕ ಕೆರೆಯ ಬಳಿ ಮೃತದೇಹ ಪತ್ತೆಯಾಗಿದೆ.



Join Whatsapp