ಆಸ್ಕರ್’ಗೆ ಅಧಿಕೃತ ಪ್ರವೇಶ ಪಡೆದ ‘ಸಾವರ್ಕರ್’ ಸಿನಿಮಾ

Prasthutha|

ಚೆನ್ನೈ: ‘ಲಾಪತಾ ಲೇಡೀಸ್’ ಚಿತ್ರದ ನಂತರ ಇದೀಗ ಬಾಲಿವುಡ್ ನಟ ರಣದೀಪ್ ಹೂಡಾ ನಟಿಸಿ, ನಿರ್ದೇಶಿಸಿರುವ ‘ಸಾವರ್ಕರ್’ ಚಿತ್ರ 2025ನೇ ಸಾಲಿನ ಆಸ್ಕರ್ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದಿದೆ.
ಈ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಸಂತಸ ಹಂಚಿಕೊಂಡಿರುವ ಚಿತ್ರತಂಡ, ಪೋಸ್ಟರ್ ವೊಂದನ್ನು ಹಂಚಿಕೊಂಡಿದೆ.

- Advertisement -


‘ನಮ್ಮ ಸಿನಿಮಾ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಆಸ್ಕರ್ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದಿದೆ. ಚಿತ್ರವನ್ನು ಗುರುತಿಸಿ ಆಯ್ಕೆ ಮಾಡಿದ್ದಕ್ಕಾಗಿ ಭಾರತೀಯ ಚಲನಚಿತ್ರ ಫೆಡರೇಷನ್ ಗೆ ಧನ್ಯವಾದಗಳು. ಇದೊಂದು ಅಧ್ಬುತ ಪ್ರಯಾಣವಾಗಿದ್ದು, ಈ ಪ್ರಯಾಣದಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು’ ಎಂದು ಪೋಸ್ಟ್ ಗೆ ಒಕ್ಕಣೆ ಬರೆದುಕೊಂಡಿದೆ.


ಸಾವರ್ಕರ್ ಜೀವನಾಧಾರಿತ ಚಿತ್ರ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಇದೇ ವರ್ಷ ಮಾರ್ಚ್ 22ರಂದು ಹಿಂದಿ ಹಾಗೂ ಮರಾಠಿ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು.



Join Whatsapp