ತಿರುಪತಿ ಲಡ್ಡು ಪ್ರಸಾದದಲ್ಲಿ ತಂಬಾಕು ತುಂಡುಗಳು ಪತ್ತೆ: ಮಹಿಳೆ ಗಂಭೀರ ಆರೋಪ

Prasthutha|

- Advertisement -

ಹೈದರಾಬಾದ್: ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ನೀಡಲಾಗುವ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬಿನ ಅಂಶ ಪತ್ತೆಯಾಗಿರುವ ವಿಚಾರ ಮಾಸುವ ಮುನ್ನವೇ ತೆಲಂಗಾಣದ ಮಹಿಳಾ ಭಕ್ತೆಯೊಬ್ಬರು ತನಗೆ ನೀಡಲಾದ ಲಡ್ಡು ಪ್ರಸಾದದಲ್ಲಿ ತಂಬಾಕು ತುಂಡುಗಳು ಪತ್ತೆಯಾಗಿರುವುದಾಗಿ ಆರೋಪಿಸಿದ್ದಾರೆ.

ಲಡ್ಡು ಪ್ರಸಾದದಲ್ಲಿ ಕೊಬ್ಬಿನ ಅಂಶ ಇರುವ ಕುರಿತು ಗುಜರಾತ್ ಪ್ರಯೋಗಾಲಯದಲ್ಲಿ ನೀಡಲಾದ ವರದಿಯಲ್ಲಿ ದೃಢಪಟ್ಟಿದ್ದು ಇದೀಗ ಲಡ್ಡು ವಿಚಾರ ಚರ್ಚೆಗೆ ಗ್ರಾಸವಾಗಿದೆ.

- Advertisement -

ಈ ನಡುವೆ ತೆಲಂಗಾಣದ ಖಮ್ಮಂ ಜಿಲ್ಲೆಯ ಭಕ್ತೆಯೊಬ್ಬರು ಪವಿತ್ರ ತಿರುಪತಿ ಲಡ್ಡು ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಮನೆಗೆ ತಂದ ಪ್ರಸಾದದಲ್ಲಿ ಕಾಗದದಲ್ಲಿ ಸುತ್ತಿದ ತಂಬಾಕು ತುಂಡುಗಳು ಪತ್ತೆಯಾಗಿವೆ ಎಂದು ಆರೋಪಿಸಿದ್ದಾರೆ. ಪವಿತ್ರ ನೈವೇದ್ಯಗಳ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸುವುದರ ಕುರಿತು ನಡೆಯುತ್ತಿರುವ ವಿವಾದದ ನಡುವೆ ಈ ಘಟನೆ ಮತ್ತಷ್ಟು ಚರ್ಚೆ ಹುಟ್ಟು ಹಾಕಿದೆ.



Join Whatsapp