ಮುಂಬೈ: ಬದ್ಲಾಪುರದಲ್ಲಿ ಇಬ್ಬರು ನರ್ಸರಿ ಶಾಲಾ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಅಕ್ಷಯ್ ಶಿಂಧೆ ಪೊಲೀಸ್ ವಾಹನದೊಳಗೆ ಪೊಲೀಸ್ ಅಧಿಕಾರಿಯ ಮೇಲೆ ಗುಂಡು ಹಾರಿಸಿದ್ದಾನೆ. ಈ ವೇಳೆ ಪೊಲೀಸರು ಪ್ರತಿಯಾಗಿ ಗುಂಡಿನ ದಾಳಿ ನಡೆಸಿದ್ದರಿಂದ ಗಾಯಗೊಂಡ ಅಕ್ಷಯ್ ಶಿಂಧೆ ಸಾವನ್ನಪ್ಪಿದ್ದಾನೆ.
23 ವರ್ಷದ ಅಕ್ಷಯ್ ಶಿಂಧೆ ಎಂಬಾತ ಕಾನ್‌ಸ್ಟೆಬಲ್‌ನ ಬಂದೂಕನ್ನು ಕಿತ್ತುಕೊಂಡು ಗುಂಡು ಹಾರಿಸಿ ಗಾಯಗೊಂಡಿದ್ದ. ಬಳಿಕ ಆತ ಮೃತಪಟ್ಟಿದ್ದಾನೆ.
ಅಕ್ಷಯ್ ಶಿಂಧೆಯನ್ನು ಕಸ್ಟಡಿಗೆ ತೆಗೆದುಕೊಳ್ಳಲು ಬದ್ಲಾಪುರದ ಅಧಿಕಾರಿಗಳು ತಲೋಜಾ ಜೈಲಿಗೆ ತೆರಳಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ