ಕಾರವಾರ: ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವಳಿ ನದಿಯಲ್ಲಿ 3ನೇ ಹಂತದ ಶೋಧ ಕಾರ್ಯ ನಡೆಯುತ್ತಿದೆ. ಈ ವೇಳೆ ಕೇರಳದ ಚಾಲಕ ಅರ್ಜುನ್ ಓಡಿಸುತ್ತಿದ್ದ ಲಾರಿಗೆ ಅಳವಡಿಸಿದ್ದ ಕ್ರ್ಯಾಶ್ ಗಾರ್ಡ್ ಪತ್ತೆ ಆಗಿದೆ.
ಡ್ರೆಜ್ಜರ್ ಯಂತ್ರದ ಮೂಲಕ ಕಾರ್ಯಾಚರಣೆ ವೇಳೆ ಲಾರಿ ಕ್ರ್ಯಾಶ್ ಪತ್ತೆ ಆಗಿದೆ.
ಲಾರಿ ಕ್ರ್ಯಾಶ್ ಗಾರ್ಡ್ ಪತ್ತೆ ಹಿನ್ನೆಲೆಯಲ್ಲಿ ನಿವೃತ್ತ ಸೇನಾಧಿಕಾರಿ ಇಂದ್ರಬಾಲನ್ ನಿರ್ದೇಶನದಂತೆ ಕಾರ್ಯಾಚರಣೆ ಮುಂದುವರೆದಿದೆ. ಹೀಗಾಗಿ ಶಾಸಕ ಸತೀಶ್ ಸೈಲ್ ಮತ್ತು ಎಸ್ಪಿ ನಾರಾಯಣ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಈ ಬಗ್ಗೆ ನಿವೃತ್ತ ಸೇನಾಧಿಕಾರಿ ಇಂದ್ರಬಾಲನ್ ಪ್ರತಿಕ್ರಿಯಿಸಿದ್ದು, ನಾವು ಈ ಹಿಂದೆ ಸೂಚಿಸಿದ್ದ ಸ್ಥಳದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಡ್ರೋನ್ ಕಾರ್ಯಾಚಾರಣೆಯಿಂದ ನಾಲ್ಕು ಪಾಯಿಂಟ್ ಗುರುತಿಸಿದ್ದೇವು. ನಮ್ಮ ತಂಡದ ಮಾಹಿತಿ ಪ್ರಕಾರ ನಾಲ್ಕನೇ ಪಾಯಿಂಟ್ನಲ್ಲಿ ಲಾರಿ ಇದೆ. ಈ ನಾಲ್ಕನೇ ಪಾಯಿಂಟ್ ನದಿಯ ಆಳದಲ್ಲಿ ಇದ್ದು ಅಲ್ಲಿ ಅಪಾರ ಮಣ್ಣು ಇದೆ ಎಂದಿದ್ದಾರೆ.