ಪ್ರಕ್ಷುಬ್ಧತೆಯಲ್ಲಿದ್ದ ನಗರವನ್ನು ಶಾಂತಿಯುತ ಗೊಳಿಸಿದ ಪೊಲೀಸ್ ಇಲಾಖೆಯ ಕಾರ್ಯವೈಖರಿ ಶ್ಲಾಘನೀಯ: ಅಪ್ಸರ್ ಕೊಡ್ಲಿಪೇಟೆ

Prasthutha|

- Advertisement -

ದಾವಣಗೆರೆ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ ಜಿಲ್ಲಾ ಸಮಿತಿ ವಿಶೇಷ ಸಭೆಯು ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಹಾಗೂ ರಾಜ್ಯ ಸಮಿತಿ ಸದಸ್ಯರು ಮತ್ತು ಹೈ ಕೋರ್ಟ್ ವಕೀಲರಾದ ಮಜೀದ್ ಖಾನ್ ರವರ ಉಪಸ್ಥಿತಿಯಲ್ಲಿ ಮತ್ತು ಉಪಾಧ್ಯಕ್ಷರಾದ ರಜ್ವಿ ರಿಯಾಜ್ ಅಹಮದ್ ರವರ ಅಧ್ಯಕ್ಷತೆಯಲ್ಲಿ ದಾವಣಗೆರೆಯ ಜಿಲ್ಲಾ ಕಛೇರಿಯಲ್ಲಿ ಇಂದು ಜರುಗಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ರವರು ಧಾರ್ಮಿಕ ಸಹಿಷ್ಣುತೆಯ ಗುಣವು ನಮ್ಮ ಶರಣರು, ಸೂಪಿಗಳ ಪರಂಪರೆಯಲ್ಲಿದೆ. ಹೀಗಾಗಿ ರಾಷ್ಟ್ರದ ಪ್ರಗತಿಗೆ ಸಾಮರಸ್ಯದ ಆಚರಣೆಗಳು ಅಗತ್ಯವಾಗಿವೆ.
ಎಲ್ಲಾ ಧರ್ಮಗಳ ಹಬ್ಬಗಳು ಕೋಮು ಸೌಹಾರ್ದತೆಯ ಪ್ರತೀಕವಾಗಿದ್ದು ಎಲ್ಲರೂ ಕೂಡಿ ಹಬ್ಬ ಹರಿದಿನಗಳನ್ನು ಆಚರಿಸಿದರೆ ಸಮಾಜದಲ್ಲಿ ಶಾಂತಿ ಸದಾಕಾಲ ನೆಲೆಸಲಿದೆ ಮತ್ತು ಪರಸ್ಪರರಲ್ಲಿ ಪ್ರೀತಿ, ಸ್ನೇಹ ಹಾಗೂ ಸೌಹಾರ್ಧತೆ ಭಾವನೆ ಹೆಚ್ಚುವದು. ಆದರೆ ಇದಕ್ಕೆ ಅಪವಾದ ಎಂಬಂತೆ ದಾವಣಗೆರೆಯಲ್ಲಿ ಕೆಲವು ಸಂಘಪರಿವಾರದ ಕಾರ್ಯಕರ್ತರು ಗಣೇಶೋತ್ಸವ ಹೆಸರಿನಲ್ಲಿ ಪ್ರಚೋದನೆ ಗಳನ್ನು ಮಾಡುವ ಮೂಲಕ ಶಾಂತಿಗೆ ಭಂಗ ತರುವ ಕೃತ್ಯ ಎಸಗುತಿದ್ದು, ಹಿಂದೂ ಭಾಂದವರು ಅಂತಹ ಕಿಡಿಗೇಡಿಗಳನ್ನು ಗಣೇಶ ಮೆರವಣಿಗೆಯಿಂದ ದೂರ ಇಟ್ಟರೇ ಯಾವುದೇ ಅನಾಹುತಗಳು ನಡೆಯುವ ಸಾಧ್ಯತೆ ಇಲ್ಲ,ಇದಕ್ಕೆ ಸಾಕ್ಷಿ ಎಂಬಂತೆ ಮೂನ್ನೆ ಮುಸ್ಲಿಂರ ಈದ್ ಮಿಲಾದ್ ಮೆರವಣಿಗೆಯಲ್ಲಿ ಇದೇ ದಾವಣಗೆರೆ ನಗರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಯಾವುದೇ ಪ್ರಚೋದನಕಾರಿ ಘೋಷಣೆ ಗಳನ್ನು ಕೂಗದೆ ಸುಮಾರು 8 ಕಿಲೋಮೀಟರ್ ಉದ್ದದ ಮೆರವಣಿಗೆ ನಡೆಸಿರುವುದಾಗಿದೆ.

- Advertisement -

ಕರ್ನಾಟಕ ರಾಜ್ಯ ಸೇರಿದಂತೆ ದಾವಣಗೆರೆ ಜಿಲ್ಲೆಯಲ್ಲೂ ಸಂಘ ಪರಿವಾರ ಮತ್ತು ಬಿಜೆಪಿ ತನ್ನ ನಾಯಕರ ಒಳ ಜಗಳವನ್ನು ತಡೆಯಲು ಸಾಧ್ಯವಾಗದೆ ವಿಷಯಾಂತರ ಮಾಡಲು ರಾಜ್ಯದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿದೆ, ಇದರ ಮುಂದುವರಿದ ಭಾಗವಾಗಿ ದಾವಣಗೆರೆ ನಗರದ ಬೇತೂರು ರಸ್ತೆ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಗಲಾಟೆ ನಡೆದು ನಗರದಲ್ಲಿ ಅಶಾಂತಿ ಸೃಷ್ಟಿ ಆಗಿರುತ್ತದೆ. ಇದಕ್ಕೂ ಮುಂಚೆ ಅಹಮದ್ ನಗರ ಧ್ವಜ ಕಟ್ಟುವ ವಿಚಾರದಿಂದ ಹಿಡಿದು ಕೆಲವೊಂದು ವಿಚಾರವನ್ನು ಹೊರತುಪಡಿಸಿ ಪ್ರಕ್ಷುಬ್ಧತೆಯಲ್ಲಿದ್ದ ನಗರವನ್ನು ಶಾಂತಿಯುತ ಗೊಳಿಸುವಲ್ಲಿ ಪೋಲೀಸ್ ಇಲಾಖೆಯ ಕಾರ್ಯವೈಖರಿ ಶ್ಲಾಘನೆಗೆ ಅರ್ಹವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ
ಮುಂದುವರಿದು ಮಾತನಾಡಿ ಅವರು ಬಿಜೆಪಿ ರಾಜಕೀಯ ಲಾಭಕ್ಕಾಗಿ ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಲು ಪಿತೂರಿ ನಡೆಸುತ್ತಿದೆ, ಕ್ರಮ ಕೈಗೊಳ್ಳಬೇಕಾಗಿದ್ದ ಕಾಂಗ್ರೆಸ್ ಸರ್ಕಾರ ನಿರ್ಲಕ್ಷವೇ ತಾಳುತ್ತಿರುವುದೇ ಪ್ರಕ್ಷುಬ್ಧತೆಗೆ ಕಾರಣವಾಗುತ್ತಿದೆ, ಹೊನ್ನಳ್ಳಿಯ ಮಾಜಿ ಶಾಸಕರಾದ ರೇಣುಕಾಚಾರ್ಯ ಬಂದು ಬೇತೂರು ರಸ್ತೆಯ ಗಲಾಟೆಗೆ ಸಂಬಂಧಿಸಿದಂತೆ 03 ಜನರನ್ನು ಬಿಡಿಸಿದ್ದಾರೆ ಎಂಬ ಸುದ್ದಿ ಪತ್ರಿಕೆಗಳಲ್ಲಿ ವರದಿಯಾಗಿರುತ್ತದೆ ಇದರ ಸತ್ಯ ಸತ್ಯತೆಯನ್ನು ಪೊಲೀಸ್ ಇಲಾಖೆ ಜನಸಾಮಾನ್ಯರಿಗೆ ತಿಳಿಸಬೇಕು ಆಗ್ರಹಿಸಿದರೂ.
ಈಗ ನಗರದಲ್ಲಿ ಶಾಂತಿ ನೆಲೆಸಿದ್ದು, ಈ ವಿಚಾರದಲ್ಲಿ ಯಾವುದೇ ಅಮಾಯಕರನ್ನು ಬಂಧಿಸದಂತೆ, ಹಾಗೂ ಒಂದು ವೇಳೆ ಬಂಧಿಸಿದರೆ ಅವರನ್ನು ವಿಚಾರಣೆ ಮಾಡಿ ಶೀಘ್ರವಾಗಿ ಬಿಡುಗಡೆಗೊಳಿಸಲು ಒತ್ತಾಯಿಸಿದರು.
ಮುಸ್ಲಿಂ ಸಮುದಾಯದ ವೋಟ್ ಪಡೆದು ಗೆದ್ದು ಬಂದಿರುವ ಲೋಕಸಭಾ ಸದಸ್ಯೆ ಇದುವರೆಗೆ ಅಮಾಯಕ ಸಂತ್ರಸ್ತರ ಮನೆಗಳಿಗೆ ಕನಿಷ್ಠ ಸೌಜನ್ಯಕ್ಕಾದರೂ ಭೇಟಿ ನೀಡದಿರುವುದು ಖಂಡನೀಯ ಎಂದು ಜಿಲ್ಲಾ ಉಪಾಧ್ಯಕ್ಷರಾದ ರಿಯಾಝ್ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದರು.

ಈ ಸಮಯದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹಮ್ಮದ್ ಮೋಹಸೀನ್, ಫಯಾಜ್ ಅಹಮದ್, ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಅಜರುದ್ದೀನ್, ಜಿಲ್ಲಾ ಕೋಶಾಧಿಕಾರಿ
ಎ ಆರ್ ತಾಹಿರ್, ಜಿಲ್ಲಾ ಸಮಿತಿ ಸದಸ್ಯರಾದ ಮನ್ಸೂರ್ ಆಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಏಜಾಜ್ ಅಹಮದ್ ರವರು ಉಪಸ್ಥಿತರಿದ್ದರು.



Join Whatsapp