ಮುನಿರತ್ನ ವಿರುದ್ಧ ತನಿಖೆ ನಡೆಸಲು SITಗೆ ಸಂಪೂರ್ಣ ಸ್ವಾತಂತ್ರ್ಯವಿದೆ: ಸಿಎಂ ಸಿದ್ದರಾಮಯ್ಯ

Prasthutha|

- Advertisement -

ಕೊಪ್ಪಳ: ಬಿಜೆಪಿ ಶಾಸಕ ಮುನಿರತ್ನ ಬಂಧನ ಪ್ರಕರಣಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಮುನಿರತ್ನ ಅವರು ಸಾಕಷ್ಟು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಹಾಗಾಗಿ ಎಫ್ ಐಆರ್ ದಾಖಲಾಗಿದೆ. ತನಿಖೆಗೆ ಎಸ್ಐಟಿ ರಚನೆ ಮಾಡಲಾಗಿದೆ. ಅವರಿಗೆ ಕಾನೂನು ಉಲ್ಲಂಘಿಸಿ ಎಂದು ನಾವು ಹೇಳಿಲ್ಲವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯಾರ ವಿರುದ್ಧವೂ ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಮುನಿರತ್ನನಿಗೆ ಅಪರಾಧ ಮಾಡು ಎಂದು ನಾವು ಹೇಳಿದ್ದೆವಾ?…ಮುನಿರತ್ನ ಮೇಲೆ ಮೂರು ಪ್ರಕರಣ ದಾಖಲಾಗಿದೆ. ಶಾಸಕರ ಮನವಿ ಮೇರೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ, ಅತ್ಯಾಚಾರ ಮತ್ತು ಹನಿ ಟ್ರ್ಯಾಪಿಂಗ್ ಆರೋಪದ ಮೇಲೆ ಕಾನೂನು ಪ್ರಕಾರ ಮುನಿರತ್ನ ಅವರನ್ನು ಬಂಧಿಸಲಾಗಿದೆ, ನಿವೃತ್ತ ಐಪಿಎಸ್ ಅಧಿಕಾರಿ ಬಿಕೆ ಸಿಂಗ್ ಅವರಿಗೆ ತನಿಖೆ ನೇತೃತ್ವ ವಹಿಸಲಾಗಿದೆ.

- Advertisement -

ಸರ್ಕಾರ ಯಾರ ವಿರುದ್ಧವೂ ಇಲ್ಲ. ನಾವು ಯಾರನ್ನೂ ಗುರಿಯಾಗಿಸಿಕೊಂಡಿಲ್ಲ ಅಥವಾ ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಶಾಸಕರ ವಿರುದ್ಧ ಮೂರು ಎಫ್‌ಐಆರ್‌ಗಳು ದಾಖಲಾಗಿವೆ ಮತ್ತು ಈಗ ಕಾನೂನು ಕ್ರಮ ಕೈಗೊಳ್ಳುವ ಸಮಯ ಬಂದಿದೆ. ಪೊಲೀಸರು ಮತ್ತು ಎಸ್‌ಐಟಿಗೆ ತನಿಖೆ ನಡೆಸಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ತಿಳಿಸಿದರು.



Join Whatsapp