ಕೊಲಂಬೊ: ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಎಡಪಂಥೀಯ ನಾಯಕ ಅನುರಾ ಕುಮಾರ ದಿಸ್ಸಾನಾಯಕೆ ಗೆಲುವು ಸಾಧಿಸಿದ್ದಾರೆ.
ಹಾಲಿ ಅಧ್ಯಕ್ಷರಾಗಿದ್ದ ರನಿಲಾ ವಿಕ್ಸಮಸಿಂಘೆ ಸೋಲನುಭವಿಸಿದ್ದಾರೆ.
ದಿಸ್ಸಾನಾಯಕೆ ಅವರು 42.31 ಶೇಕಡಾ ಮತಗಳನ್ನು ಗಳಿಸಿದ್ದಾರೆ. ಎಡಪಂಥೀಯ ಒಕ್ಕೂಟವಾದ ಪೀಪಲ್ಸ್ ಲಿಬರೇಶನ್ ಫ್ರಂಟ್ (ಜೆವಿಪಿ) ಯ ನಾಯಕ ದಿಸ್ಸಾನಾಯಕೆ ಗೆಲುವು ದಾಖಲಿಸಿದ್ದಾರೆ.
2019 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಕೇವಲ 3 ಪ್ರತಿಶತದಷ್ಟು ಮತಗಳನ್ನು ಪಡೆದಿದ್ದ ಜೆವಿಪಿಗೆ ಈ ಗೆಲುವು ಪ್ರಮುಖ ರಾಜಕೀಯ ತಿರುವನ್ನು ನೀಡಿದೆ.
ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟು ಈಗ ಚೇತರಿಸಿಕೊಳ್ಳುತ್ತಿರುವ ಶ್ರೀಲಂಕಾದ ಜನರು ಹೊಸ ಅಧ್ಯಕ್ಷರ ಆಯ್ಕೆಗೆ ಶನಿವಾರ ಮತ ಚಲಾಯಿಸಿದ್ದರು. ಶೇ.76 ರಷ್ಟು ಮತದಾನವಾಗಿತ್ತು.