ತಿರುಪತಿ ಲಡ್ಡು ಪ್ರಕರಣ: ಕರ್ನಾಟಕದ ಎಲ್ಲ ಮುಜರಾಯಿ ದೇಗುಲಗಳ ಪ್ರಸಾದ ಪರೀಕ್ಷೆಗೆ ಸೂಚನೆ

Prasthutha|

- Advertisement -

ಬೆಂಗಳೂರು: ತಿರುಪತಿ ತಿರುಮಲ ದೇಗುಲದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿರುವ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕರ್ನಾಟಕ ಸರ್ಕಾರ, ರಾಜ್ಯದ ಮುಜರಾಯಿ ವ್ಯಾಪ್ತಿಯ ಎಲ್ಲ ದೇಗುಲಗಳಲ್ಲಿ ಪ್ರಸಾದ ತಯಾರಿಗೆ ನಂದಿನಿ ತುಪ್ಪವನ್ನೇ ಬಳಸುವಂತೆ ಶುಕ್ರವಶರ ಸುತ್ತೋಲೆ ಹೊರಡಿಸಿತ್ತು. ಇದೀಗ ಮುಜರಾಯಿ ವ್ಯಾಪ್ತಿಯ ಎಲ್ಲ ದೇಗುಲಗಳ ಪ್ರಸಾದವನ್ನು ಪ್ರಯೋಗಾಲಯದಲ್ಲಿ ಪರಿಶೀಲನೆಗೆ ಒಳಪಡಿಸುವಂತೆ ಆದೇಶಿಸಿದೆ.

ಮುಜರಾಯಿ ಇಲಾಖೆ ಅಡಿಯಲ್ಲಿ ರಾಜ್ಯದಲ್ಲಿ 34,000 ಕ್ಕೂ ಹೆಚ್ಚು ದೇವಾಲಯಗಳಿವೆ. ಅವುಗಳಲ್ಲಿ, 205 ದೇಗುಲಗಳ ವಾರ್ಷಿಕ ಆದಾಯ 25 ಲಕ್ಷ ರೂ.ಗಿಂತ ಹೆಚ್ಚಿದ್ದು, ವರ್ಗ-ಎ ಎಂದು ವರ್ಗೀಕರಿಸಲ್ಪಟ್ಟಿವೆ. 193 ದೇಗುಲಗಳನ್ನು 5 ಲಕ್ಷದಿಂದ ರೂ. 25 ಆದಾಯದೊಂದಿಗೆ ವರ್ಗ-ಬಿ ಎಂದು ಗುರುತಿಸಲಾಗಿದೆ. ಉಳಿದವುಗಳನ್ನು 5 ಲಕ್ಷ ರೂ. ಆದಾಯದೊಂದಿಗೆ ವರ್ಗ-ಸಿ ಎಂದು ವರ್ಗೀಕರಿಸಲಾಗಿದೆ. ಇವುಗಳಲ್ಲಿ ಹೆಚ್ಚಿನ ದೇವಾಲಯಗಳು ಭಕ್ತರಿಗೆ ಪ್ರಸಾದವನ್ನು ನೀಡುತ್ತವೆ.



Join Whatsapp