ಬೈರೂತ್: ಲೆಬನಾನ್ ನಾಗರಿಕ ವಿಮಾನಯಾನ ಪ್ರಾಧಿಕಾರ ವಿಮಾನಗಳಲ್ಲಿ ಪೇಜರ್ ಹಾಗೂ ವಾಕಿಟಾಕಿಗಳ ಬಳಕೆಯನ್ನು ನಿಷೇಧಿಸಿ ಆದೇಶಿಸಿದೆ.
ಲೆಬನಾನ್ ಹಾಗೂ ಸಿರಿಯಾದಲ್ಲಿ ಪೇಜರ್ ಹಾಗೂ ವಾಕಿಟಾಕಿಗಳು ಸ್ಫೋಟಗೊಂಡು 12 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. 3,000ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಈ ಘಟನೆಯ ಬೆನ್ನಲ್ಲೇ ಲೆಬನಾನ್ ಪೇಜರ್ಗಳ ಬಳಕೆಯನ್ನು ನಿಷೇಧಿಸಿದೆ.
ಬೈರೂತ್ ನ ಹರಿರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನಗಳಲ್ಲಿ ಪೇಜರ್, ವಾಕಿಟಾಕಿಗಳನ್ನು ಕೊಂಡೊಯ್ಯುವಂತಿಲ್ಲ ಎಂದು ಆದೇಶಿಸಿದೆ.
ಲೆಬನಾನ್ ನಲ್ಲಿ ಪೇಜರ್ ಗಳ ಸ್ಪೋಟದ ಬೆನ್ನಲ್ಲೇ ಹಿಜ್ಬುಲ್ಲಾ ಸಂಘಟನೆ ಇಸ್ರೇಲ್ ಮೇಲೆ ವ್ಯಗ್ರವಾಗಿದ್ದು, ಪ್ರತಿ ದಾಳಿ ಆರಂಭಿಸಲು ಗುರುವಾರ ಸಿದ್ದತೆ ನಡೆಸಿತ್ತು.