ಶಿವಮೊಗ್ಗ | ಗಣೇಶ ಮೆರವಣಿಗೆಯ ವೇಳೆ ಮುಸ್ಲಿಂ ಸಮುದಾಯದ ವಿರುದ್ಧ ಅಸಭ್ಯ ಘೋಷಣೆ: ದೂರು ದಾಖಲು

Prasthutha|

ಶಿವಮೊಗ್ಗ: ಅಮೀರ್ ಅಹಮದ್ ವೃತ್ತದಲ್ಲಿ ಗಣಪತಿ ಮೆರವಣಿಗೆಯ ವೇಳೆ ಮುಸ್ಲಿಂ ಸಮುದಾಯದ ವಿರುದ್ಧ ಅಸಭ್ಯ ಘೋಷಣೆ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಾಗರಿಕರು ಶಿವಮೊಗ್ಗ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದಾರೆ.

- Advertisement -

ಪೊಲೀಸರಿಗೆ ಕೊಟ್ಟ ದೂರಿನಲ್ಲಿ
ಮಂಗಳವಾರ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯ ಸಮಯದಲ್ಲಿ, ಜಾಮಿಯಾ ಮಸೀದಿಯ ಮುಂಭಾಗ ಕೆಲ ಯುವಕರು ಮಾನವ ಪಿರಮಿಡ್ ಮಾಡಿಕೊಂಡು, ಅದರ ಮೇಲೆಹತ್ತಿರುವ ಒಬ್ಬ ಹುಡುಗ ತೊಡೆಗೆ ಶೆಡ್ ಹೊಡಿಯುವ ಘಟನೆ ಮತ್ತು ಹಿಂದೂ ಮಹಾಸಭಾ ಮೆರವಣಿಗೆಯು ಸಂಜೆ 7:30 ಗಂಟೆಗೆ ಅಮೀರ್ ಅಹಮದ್ ವೃತ್ತದಿಂದ ಹಾದುಹೋಗುವಾಗ, ಕೆಲವು ದುಷ್ಕರ್ಮಿಗಳು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ವಿರುದ್ಧ ಅಸಭ್ಯ ಘೋಷಣೆಗಳನ್ನು ಮಾಡಿ, ‘ಸಾಬ್ರೂ ಸೂಳೆ ಮಕ್ಕಳು’ ಎಂದು ಅವಹೇಳನಾತ್ಮಕವಾಗಿ ಅವಾಚ್ಯ ಶಬ್ದಗಳಿಂದ ವರ್ತಿಸಿರುತ್ತಾರೆ. ಮತ್ತು ಅಮೀರ್ ಅಹಮದ್ ವೃತ್ತದ ಮುಂದೆ ಕೈ ತೋರಿಸಿ. ಮುಸ್ಲಿಂ ಸಮುದಾಯದ ಮಾನ ಹಾನಿಗೊಳಿಸುವ ರೀತಿಯಲ್ಲಿಯೇ ನಡೆದುಕೊಂಡಿರುತ್ತಾರೆ.

ಈ ಘಟನೆಗೆ ಸಂಬಂಧಿಸಿದ ವಿಡಿಯೋಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಇದು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಭಾವನೆಗಳಿಗೆ ತೀವ್ರ ಧಕ್ಕೆಯನ್ನುಂಟು ಮಾಡುತ್ತಿದೆ. ಈ ದುರಂತದಿಂದ, ಶಿವಮೊಗ್ಗ ನಗರದಲ್ಲಿ ಶಾಂತಿ-ಸೌಹಾರ್ದತೆಯನ್ನು ಕೆಡಿಸುವ ಉದ್ದೇಶದಿಂದ ಇಂತಹ ಘೋಷಣೆಗಳನ್ನು ಕೂಗಿದವರಿಗೆ ಮತ್ತು ಸಾಮಾಜಿಕ ಜಾಲತಾಣದಲ್ಲಿ Instagram https://www.instagram.com/reel/DABpv7BS0Ud/?igsh=NHZzaWFqb2xyMGt0 ನಲ್ಲಿ ಈ ವಿಡಿಯೋ ಶೇರ್ ಮಾಡಿದಂತಹ ಅಡ್ಮಿನ್ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಿ ಸೌಹಾರ್ದ ಹಾಗೂ ಬಾಂಧವ್ಯಪೂರ್ಣ ವಾತಾವರಣವನ್ನು ಕಾಪಾಡಲು ಮುಸ್ಲಿಂ ಸಮುದಾಯದವತಿಯಿಂದ ಶಿವಮೊಗ್ಗ ನಗರದ ನಿವಾಸಿಗಳಾದ ನಾವು ಕೇಳಿಕೊಳ್ಳುತ್ತಿದ್ದೇವೆ.

- Advertisement -

ಈ ಹಿನ್ನೆಲೆಯಲ್ಲಿ, ಈ ಘಟನೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ, ಆರೋಪಿಗಳ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ತಿಳಿಸಲಾಗಿದೆ.



Join Whatsapp