ನ್ಯೂಯಾರ್ಕ್: ಸ್ವಾಮಿನಾರಾಯಣ ದೇವಾಲಯದ ಮೇಲೆ ದಾಳಿ

Prasthutha|

ವಾಷಿಂಗ್ಟನ್: ನ್ಯೂಯಾರ್ಕ್ ನ ಮೆಲ್ವಿಲ್ಲೆಯಲ್ಲಿರುವ BAPS ಸ್ವಾಮಿನಾರಾಯಣ ದೇವಾಲಯದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಅಮೆರಿಕ ಶಾಸಕಾಂಗ ನಾಯಕರು, ಸದಸ್ಯರು ತೀವ್ರವಾಗಿ ಖಂಡಿಸಿದ್ದಾರೆ.

- Advertisement -


ಈ ಘಟನೆ ಬಗ್ಗೆ ತನಿಖೆ ನಡೆಯುತ್ತಿದ್ದು ಘಟನೆಗೆ ಕಾರಣರಾದವರು ಯಾರು ಎಂಬುದು ಬಹಿರಂಗವಾಗಿಲ್ಲ. ಆದರೆ, ದಾಳಿ ವೇಳೆ ಮೋದಿ, ಭಾರತ ವಿರೋಧಿ ಬರಹಗಳು ಕಂಡು ಬಂದಿವೆ ಎಂದು ಕೆಲ ವರದಿಗಳು ತಿಳಿಸಿವೆ. ಇನ್ನೊಂದೆಡೆ ಈ ಘಟನೆಯ ಹೊಣೆಯನ್ನು ಎಫ್ ಬಿಐಗೆ ನೀಡಬೇಕು ಎಂದು ಅಮೆರಿಕದ ಭಾರತೀಯ ಸಮುದಾಯದ ವಕ್ತಾರರು ಹೇಳಿದ್ದಾರೆ.


ಅಮೆರಿಕಕ್ಕೆ ಅವಮಾನಕರವಾದ ಈ ಘಟನೆಗೆ ಕಾರಣರಾದವರನ್ನು ಕಾನೂನಿನ ಅಡಿ ಶಿಕ್ಷಿಸಬೇಕಿದೆ ಎಂದು ಹೇಳಿದ್ದಾರೆ.

- Advertisement -


ಹಿಂಸಾಚಾರದ ಕೃತ್ಯಗಳಿಗೆ ಅಮೆರಿಕದಲ್ಲಿ ಯಾವುದೇ ನೆಲೆಯಿಲ್ಲ. ಆರಾಧನಾ ಸಂಸ್ಕೃತಿಯು ನಮ್ಮ ಪ್ರಜಾಪ್ರಭುತ್ವದ ತಳಹದಿಯಾಗಿದೆ. ಹಿಂದೂ ದೇವಾಲಯವನ್ನು ಅಪವಿತ್ರಗೊಳಿಸುವ ಈ ಕೆಲಸವನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸಂಸದ ರಾವ್ ಖನ್ನಾ ಹೇಳಿದ್ದಾರೆ.



Join Whatsapp