ಭಿಕ್ಷೆ ಬೇಡುವ ಹುಡುಗಿಯ ಇಂಗ್ಲಿಷ್’ಗೆ ವಿದೇಶಿಗ ಫುಲ್ ಫಿದಾ

Prasthutha|

ಭಿಕ್ಷೆ ಬೇಡುವ ಬಾಲಕಿಯೊಬ್ಬಳು ಇಂಗ್ಲಿಷ್ ಮಾತನಾಡುವ ರೀತಿ ನೋಡಿ ವಿದೇಶಿಗನೊಬ್ಬ ಫುಲ್ ಫಿದಾ ಆಗಿದ್ದಾನೆ.

- Advertisement -


ವಿದೇಶಿಗನೊಂದಿಗೆ ಭಿಕ್ಷೆ ಬೇಡುವ ಬಾಲಕಿಯೊಬ್ಬಳು ಇಂಗ್ಲಿಷ್ ನಲ್ಲಿ ಮಾತನಾಡುವ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋವನ್ನು @azizkavish ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ತಾನು ರಾಜಸ್ತಾನದವಳು. ಬಡತನದ ಕಾರಣದಿಂದ ನನಗೆ ಶಾಲೆಗೆ ಹೋಗಲು ಸಾಧ್ಯವಾಗಿಲ್ಲ. ಆದರೆ ತನಗೂ ಶಾಲೆಗೆ ಹೋಗಬೇಕು ಎನ್ನುವ ಇಚ್ಛೆ ಇದೆ ಎಂದು ಇಂಗ್ಲಿಷ್ ನಲ್ಲಿಯೇ ಹೇಳಿಕೊಂಡಿದ್ದಾಳೆ.


ಹುಡುಗಿ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವುದನ್ನು ನೋಡಿ ಶಾಕ್ ಆಗಿರುವ ವಿದೇಶಿಗನು, ಯಾಕೆ ನೀನು ಭಿಕ್ಷೆ ಬೇಡುತ್ತಿದ್ದೀಯಾ? ಇಷ್ಟು ಚೆನ್ನಾಗಿ ಇಂಗ್ಲಿಷ್ ಮಾತನಾಡುತ್ತಿ. ನಿನಗೆ ಕೆಲಸ ಸಿಗುತ್ತದೆ ಎಂದಿದ್ದಾನೆ. ಅದಕ್ಕೆ ಬಾಲಕಿಯು, ‘ನಾನು ಶಾಲೆಗೆ ಹೋಗಿಲ್ಲ. ಹೀಗಾಗಿ ಯಾರು ನನಗೆ ಕೆಲಸ ಕೊಡುವುದಿಲ್ಲ. ನಾನು ಬಡ ಕುಟುಂಬದಿಂದ ಬಂದಿದ್ದು, ತನ್ನ ಕುಟುಂಬವನ್ನು ಸಾಕಲು ನಾನು ಭಿಕ್ಷಾಟನೆ ಮಾಡಬೇಕಾಗಿದೆ ‘ ಎಂದು ಹೇಳಿದ್ದಾಳೆ. ಕೊನೆಗೆ, ‘ನಾನು ನಿನ್ನನ್ನು ಶಾಲೆಗೆ ಕಳುಹಿಸಿದರೆ ನೀನು ಹೋಗುತ್ತೀಯಾ ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ಹುಡುಗಿ ಹೌದು ಖಂಡಿತಾ ಹೋಗುತ್ತೇನೆ ಎಂದಿದ್ದಾಳೆ. ಇದನ್ನು ಕೇಳಿದ ವಿದೇಶಿಗನು ಫೌಂಡೇಶನ್ ಮೂಲಕ ಅವಳಿಗೆ ಸಹಾಯ ಮಾಡುವುದಾಗಿ ಈ ವಿಡಿಯೋದಲ್ಲಿ ತಿಳಿಸಿದ್ದಾನೆ.



Join Whatsapp