ಜಮ್ಮು- ಕಾಶ್ಮೀರ ಚುನಾವಣೆ: ಐದು ಗ್ಯಾರಂಟಿಗಳನ್ನು ಘೋಷಿಸಿದ ಕಾಂಗ್ರೆಸ್

Prasthutha|

ಅನಂತನಾಗ್: ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ ಉದ್ಯಮಿಗಳಿಗೆ ₹5 ಲಕ್ಷದವರೆಗೆ ಬಡ್ಡಿ ರಹಿತ ಸಾಲ ಸೇರಿದಂತೆ ಐದು ಗ್ಯಾರಂಟಿಗಳನ್ನು ನೀಡುವುದಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಿಸಿದ್ದಾರೆ.

- Advertisement -


ದಕ್ಷಿಣ ಕಾಶ್ಮೀರದಲ್ಲಿ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿ ಅಭ್ಯರ್ಥಿ ಪರ ಚುನಾವಣಾ ಸಭೆ ನಡೆಸಿದ ಖರ್ಗೆ, ‘ಮಹಿಳಾ ಉದ್ಯಮಿಗಳಿಗೆ ₹5 ಲಕ್ಷವರೆಗೆ ಬಡ್ಡಿ ರಹಿತ ಸಾಲ, ಪ್ರತಿ ಕುಟುಂಬಕ್ಕೆ ₹25 ಲಕ್ಷದ ಆರೋಗ್ಯ ವಿಮೆ, ಕುಟುಂಬದ ಯಜಮಾನಿಗೆ ಮಾಸಿಕ ₹3,000 ಹಣ, ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಪ್ರತಿ ವ್ಯಕ್ತಿಗೆ 11 ಕೆಜಿ ಧಾನ್ಯಗಳನ್ನು ನೀಡುವ ಯೋಜನೆಯ ಮರುಜಾರಿ, ಮತ್ತು ಮನಮೋಹನ್ ಸಿಂಗ್ ಅವಧಿಯಲ್ಲಿ ಭರವಸೆ ನೀಡಿದಂತೆ ವಲಸೆ ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸಲಾಗುವುದು’ ಎಂದು ಖರ್ಗೆ ಹೇಳಿದರು.


ಇದಲ್ಲದೆ ಒಬಿಸಿ ಸಮುದಾಯದವರು ಕೂಡ ಸಂವಿಧಾನದಲ್ಲಿ ನಮೂದಿಸಿದಂತೆ ಹಕ್ಕುಗಳನ್ನು ಪಡೆಯಲಿದ್ದಾರೆ ಎಂದು ಖರ್ಗೆ ಭರವಸೆ ನೀಡಿದರು.



Join Whatsapp