ಹಾಸನ | ಕೋಮುಪ್ರಚೋದಿತ ಫ್ಲೆಕ್ಸ್ ತೆರವುಗೊಳಿಸಲು ಜಿಲ್ಲಾಡಳಿತ ವಿಫಲ: ಸಿದ್ದಿಕ್ ಆನೆಮಹಲ್ ಆರೋಪ

Prasthutha|

ಹಾಸನ: ಹಾಸನ ನಗರದಲ್ಲಿ ಕೆಲವು ಕೋಮುವಾದಿ ಶಕ್ತಿಗಳು ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಕೋಮುಸಾಮರಸ್ಯ ಹಾಳುಮಾಡುವ ಉದ್ದೇಶದಿಂದ ಕೋಮುಪ್ರಚೋದನಾಕಾರಿ ಚಟುವಟಿಕೆಗಳನ್ನು ಆರಂಭಿಸಿದ್ದು, ಹಾಸನ ನಗರದ ಹಾಸನಾಂಭ ಕಲಾಕ್ಷೇತ್ರದ ಸರ್ಕಾರದ ಸ್ಥಳದಲ್ಲಿ ಒಂದು ನಿರ್ಧಿಷ್ಟ ಧರ್ಮದ ಆಚರಣೆಗೆ ಜಿಲ್ಲಾಡಳಿತ ಹೇಗೆ ಅವಕಾಶ ನೀಡಿತು ಎನ್ನುವುದೇ ಪ್ರಶ್ನೆಯಾಗಿದೆ ಎಂದು ಎಸ್ ಡಿಪಿಐ ಹಾಸನ ಜಿಲ್ಲಾಧ್ಯಕ್ಷ ಸಿದ್ದಿಕ್ ಆನೆಮಹಲ್ ಹೇಳಿದ್ದಾರೆ.

- Advertisement -


ಎಸ್ ಡಿಪಿಐ ಹಾಸನ “ನಾಯಕರ ಸಭೆ”ಯಲ್ಲಿ ಜಿಲ್ಲಾಧ್ಯಕ್ಷ ಸಿದ್ದಿಕ್ ಆನೆಮಹಲ್ ಮಾತನಾಡಿದರು.

ಇದು ನಮ್ಮ ಸಂವಿಧಾನದ ಮೂಲ ಆಶಯಗಳಿಗೆ ಬಗೆದ ಅಪಚಾರವಾಗಿದೆ. ಇದು ಗೌರಿ-ಗಣೇಶ ಹಬ್ಬವನ್ನು ನಿರ್ಧಿಷ್ಟವಾಗಿ ಕೋಮುವಾದೀಕರಣ ಮಾಡುವ ದುರುದ್ದೇಶವಾಗಿದ್ದು,ಇಂತಹ ಸಮಾಜಘಾತುಕ ಕೋಮು ಪ್ರಚೋಧನಾಕಾರಿ ಘೋಷಣೆಗಳುಳ್ಳ ಫ್ಲೆಕ್ಸ್ಗಳನ್ನು ಅಳವಡಿಸಿದ್ದು ಪ್ರಜಾಪ್ರಭುತ್ವ ,ಸಂವಿಧಾನ, ಜಾತ್ಯಾತೀತಕ್ಕೆ ವಿರುದ್ಧವಾಗಿದ್ದು,ನಗರಸಭೆ,ಪೋಲೀಸ್ ಇಲಾಖೆ ಮತ್ತು ಜಿಲ್ಲಾಡಳಿತವು ದೇಶದ ಐಕ್ಯತೆಗೆ ದಕ್ಕೆ ತರುವ ಕೋಮು ಪ್ರಚೋದಿತಾ ಫ್ಲೆಕ್ಸ್ ಗಳನ್ನು ತೆರವುಗೊಳಿಸಲು ವಿಫಲವಾಗಿದೆ ಎಂದು ಆಪಾದಿಸಿದರು.

- Advertisement -

ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯರಾದ ಸೈಯ್ಯದ್ ಅಕ್ರಮ್ (ಮೌಲನಾ) ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೇರಿದರು ಗುಂಪು ಹತ್ಯೆಗಳನ್ನು ನಿಲ್ಲಿಸಲು ವಿಫಲವಾಗಿದೆ ಮಹಾರಾಷ್ಟ್ರ,ಅಸ್ಸಾಂ ರಾಜ್ಯಗಳಲ್ಲಿ ಗುಂಪು ಹತ್ಯೆ ನಡೆದಿರುವುದು ಇದಕ್ಕೆ ಉದಾಹರಣೆಯಾಗಿದೆ. ಗುಂಪು ಹತ್ಯೆ ನಡೆಸುವವರ ವಿರುದ್ಧ ಕಠಿಣ ಕಾನೂನು ರೂಪಿಸಬೇಕಾಗಿದೆ.ಕೇಂದ್ರದ ಬಿಜೆಪಿ ಸರ್ಕಾರ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ರವರ ಕೈ ಗೊಂಬೆಯಾಗಿ ಕಾರ್ಯ ನಿರ್ವಹಿಸುತ್ತಿದೆ.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಸರ್ಕಾರ ಜಾತ್ಯತೀತರೆಂದು ಹೇಳಿಕೊಳ್ಳುತ್ತಾ ಅಲ್ಪಸಂಖ್ಯಾತ ದಲಿತ ಹಾಗೂ ಹಿಂದುಳಿದ ವರ್ಗದ ಮತಗಳನ್ನು ಪಡೆದು ಅಧಿಕಾರಕ್ಕೆ ಹೇರಿದ್ದು ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ವಿರುದ್ಧ ಅಧಿಕಾರ ನಡೆಸುತ್ತಿದೆ.ಹಾಗಾಗಿ ಮುಂದೊಂದು ದಿನ ಎಸ್ಡಿಪಿಐ ಪಕ್ಷಕ್ಕೆ ಭವಿಷ್ಯವಿದ್ದು ಪಕ್ಷವನ್ನು ತಳ ಮಟ್ಟದಿಂದ ಬೆಳೆಸಬೇಕಿದೆ ಎಂದರು.

ಎಸ್ ಡಿ ಪಿ ಐ ಪಕ್ಷದ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಉದ್ದೇಶಿಸಿ ಆಫ್ಸರ್ ಕೆಆರ್ ನಗರ,ಮಾತನಾಡಿ ಕೇಂದ್ರ ಸರಕಾರ ಅಲ್ಪಸಂಖ್ಯಾತರನ್ನು ದಮನಿಸುವ ತಂತ್ರವಾಗಿ ವಖ್ಫ್ ಆಕ್ಟ್ ಬದಲಾಯಿಸುವ ಮತ್ತು ಮುಸ್ಲಿಮರ ಆಸ್ತಿಯಮೇಲೆ ಕಣ್ಣಿಟ್ಟು ದೌರ್ಜನ್ಯವೆಸಗುವ ಉದ್ದೇಶದಿಂದ ರೂಪಿಸುತ್ತಿರುವ ಕಾಯ್ದಯೆನ್ನು ಪಕ್ಷವು ತಿರಸ್ಕಾರ ಮಾಡಿಕೊಂಡು ಆಂದೋಲನ ಸೃಷ್ಟಿಸುವುದಾಗಿ ಎಚ್ಚರಿಸಿದರು.

ಕಾರ್ಯಕ್ರಮವನ್ನು ಜಿಲ್ಲಾ ಉಪಾಧ್ಯಕ್ಷರಾದ ಇಮ್ರಾನ್ ಸ್ವಾಗತಿಸಿ,ಪ್ರಧಾನಕಾರ್ಯದರ್ಶಿ ಸೈಯದ್ ಇರ್ಫಾನ್ ವಂದಿಸಿದರು. ವೇದಿಕೆಯಲ್ಲಿ ಕಾರ್ಯದರ್ಶಿ ಗಳಾದ ಸೈಯದ್ ಫರೀದ್, ವಾಜೀದ್, ಸಂಘಟನಾ ಕಾರ್ಯದರ್ಶಿ ಅನ್ಸರ್ ಜಿಲ್ಲಾ ಖಜಾಂಚಿ ತಬ್ರೇಸ್,ಮತ್ತು ಜಿಲ್ಲಾ ಸಮಿತಿ ಸದಸ್ಯರುಗಳು ಅಸೆಂಬ್ಲಿ ಅದ್ಯಕ್ಷರುಗಳು,ನೂತನವಾಗಿ ಆಯ್ಕೆಯದ ಬ್ರಾಂಚ್ ಪದಾಧಿಕಾರಿಗಳು ಹಾಜರಿದ್ದರು.



Join Whatsapp