ಪುತ್ತೂರು ನಗರಸಭೆ: ಅಧ್ಯಕ್ಷರಾಗಿ ಲೀಲಾವತಿ, ಉಪಾಧ್ಯಕ್ಷರಾಗಿ ಬಾಲಚಂದ್ರ ಆಯ್ಕೆ

Prasthutha|

ಪುತ್ತೂರು: ಪುತ್ತೂರು ನಗರಸಭೆ 2ನೇ ಅವಧಿಯ ನೂತನ ಅಧ್ಯಕ್ಷರಾಗಿ ಲೀಲಾವತಿ ಅಣ್ಣು ನಾಯ್ಕ ಮತ್ತು ಉಪಾಧ್ಯಕ್ಷರಾಗಿ ಬಾಲಚಂದ್ರ ಆಯ್ಕೆಗೊಂಡಿದ್ದಾರೆ.

- Advertisement -


ಅಧ್ಯಕ್ಷ ಸ್ಥಾನ ಪ.ಜಾತಿ ಮಹಿಳೆಗೆ ಮೀಸಲಾಗಿತ್ತು. ಬಿಜೆಪಿಯಿಂದ ಲೀಲಾವತಿ ಅಣ್ಣು ನಾಯ್ಕ ಅವರಿಗೆ ನಾಮಪತ್ರ ಸಲ್ಲಿಸಲು ಸೂಚನೆಯಂತೆ ಅವರು ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.


ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಹಿನ್ನೆಲೆಯಲ್ಲಿ ಪಿ.ಜಿ.ಜಗನ್ನಿವಾಸ ರಾವ್, ಬಾಲಚಂದ್ರ ಮತ್ತು ಸುಂದರ ಪೂಜಾರಿ ಅವರ ಹೆಸರು ಕೇಳಿ ಬಂದಿತ್ತಾದರೂ, ಪಕ್ಷದ ಸೂಚನೆಯಂತೆ ಬಾಲಚಂದ್ರ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಗೊಂಡಿದ್ದಾರೆ.

- Advertisement -

31 ಸದಸ್ಯ ಸ್ಥಾನವನ್ನು ಹೊಂದಿರುವ ಪುತ್ತೂರು ನಗರ ಸಭೆಯಲ್ಲಿ 25 ಸದಸ್ಯ ಸ್ಥಾನವನ್ನು ಹೊಂದಿರುವ ಬಿಜೆಪಿಗೆ ಬಹುಮತವಿದೆ. ಕಾಂಗ್ರೆಸ್ 5 ಮತ್ತು ಎಸ್‌ಡಿಪಿಐ 1 ಸದಸ್ಯ ಬಲ ಹೊಂದಿದೆ.


ಉಪವಿಭಾಗಾಧಿಕಾರಿ ಜುಬಿನ್ ಮೊಹಪಾತ್ರ ಮತ್ತು ತಹಸೀಲ್ದಾರ್ ಅವರು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.



Join Whatsapp