ಬಾಂಗ್ಲಾದೇಶದ ಟಿವಿ ಆ್ಯಂಕರ್ ಸಾರಾ ರಹನುಮಾ ಮೃತದೇಹ ಕೆರೆಯಲ್ಲಿ ಪತ್ತೆ

Prasthutha|

ಢಾಕಾ: ಬಾಂಗ್ಲಾದೇಶದ ಪತ್ರಕರ್ತೆ, ಟಿವಿ ಆ್ಯಂಕರ್ ಸಾರಾ ರಹನುಮಾ (33) ಮೃತದೇಹ ಢಾಕಾದ ಹತಿರ್ಜೀಲ್ ಕೆರೆಯಲ್ಲಿ ಪತ್ತೆಯಾಗಿದೆ.

- Advertisement -

ಸಾರಾ ಬಂಗಾಳಿ ಭಾಷೆಯ ಸುದ್ದಿವಾಹಿನಿಯ ನ್ಯೂಸ್‍ರೂಂ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸಾರಾ ಮೃತದೇಹ ಪತ್ತೆಯಾಗುವ ಒಂದು ದಿನ ಮೊದಲು (ಮಂಗಳವಾರ) ಅವರ ತನ್ನ ಫೇಸ್‍ಬುಕ್‌ನಲ್ಲಿ ಮಾಡಿದ್ದ ಎರಡು ಪೋಸ್ಟ್ ಗಮನ ಸೆಳೆದಿದೆ.

ಮಂಗಳವಾರ ರಾತ್ರಿ 10:24ಕ್ಕೆ ಮಾಡಿದ ಮೊದಲ ಪೋಸ್ಟ್ ನಲ್ಲಿ ಸಾರಾ, ‘ಸಾವಿಗೆ ಸಮಾನವಾದ ಜೀವನಕ್ಕಿಂದ ಸಾಯುವುದು ಉತ್ತಮ’ ಎಂದು ಬರೆದಿದ್ದರು. ಆ ಪೋಸ್ಟಿನ 12 ನಿಮಿಷದ ಬಳಿಕ ರಾತ್ರಿ 10:36ಕ್ಕೆ ಮಾಡಿದ್ದ ಎರಡನೇ ಪೋಸ್ಟ್ ನಲ್ಲಿ ಫಹೀಮ್ ಫೈಸಲ್ ಎಂಬವರನ್ನು ಕುರಿತು ಹೊಗಳಿ ಬರೆದಿದ್ದರು `ನಿಮ್ಮಂತಹ ಸ್ನೇಹಿತನನ್ನು ಹೊಂದಲು ಸಂತೋಷವಾಗಿದೆ. ದೇವರು ನಿಮ್ಮ ಮೇಲೆ ಅಲ್ಲಾಹನ ಕೃಪೆ ಯಾವಾಗಲೂ ಇರುತ್ತದೆ‌. ನಾವು ಒಟ್ಟಿಗೆ ಸಾಕಷ್ಟು ಯೋಜನೆಗಳ ಕನಸು ಕಂಡಿದ್ದೆವು. ಕ್ಷಮಿಸಿ.. ನಮ್ಮ ಯೋಜನೆಗಳನ್ನು ಪೂರೈಸಲು ಆಗಲಿಲ್ಲ. ಅಲ್ಲಾಹ್ ನಿಮ್ಮನ್ನು ಆಶೀರ್ವದಿಸಲಿ’ ಎಂದು ಸಾರಾ ಬರೆದಿದ್ದರು.

- Advertisement -

ಮೃತದೇಹ ಪತ್ತೆಯಾದ ಬಳಿಕ ಆಕೆಯ ಗಂಡ “ನಾವಿಬ್ಬರೂ ವಿಚ್ಛೇದನ ಪಡೆಯುವ ಬಗ್ಗೆ ಯೋಚಿಸಿದ್ದೆವು ಎಂದು ಹೇಳಿರುವುದಾಗಿ ಬಾಂಗ್ಲಾದೇಶದ ಮಾಧ್ಯಮಗಳಲ್ಲಿ ವರದಿಯಾಗಿದೆ.



Join Whatsapp