ಅಡ್ಡೂರು ಕಮ್ಯೂನಿಟಿ ಸೆಂಟರ್ ನಿಂದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ

Prasthutha|

ಅಡ್ಡೂರು ಕಮ್ಯೂನಿಟಿ ಸೆಂಟರ್ ವತಿಯಿಂದ 2023-2024 ಸಾಲಿನ sslc ಹಾಗೂ puc ಯಲ್ಲಿ ಗರಿಷ್ಠ ಸಾಧನೆ ಮಾಡಿದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ಕಾರ್ಯಕ್ರಮವು ಅಡ್ಡೂರಿನ ಕಮ್ಯೂನಿಟಿ ಸೆಂಟರ್ ಸಭಾಂಗದಲ್ಲಿ ಎಸಿಸಿ ಅಧ್ಯಕ್ಷರಾದ ಎಂಎಸ್ ರಫೀಕ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

- Advertisement -


ಪ್ರಸ್ತಾವಿಕವಾಗಿ ಮಾತನಾಡಿದ ಎಂ ಶರೀಫ್ ಅಡ್ಡೂರು ಸೆಂಟ್ರಲ್ ಕಮಿಟಿಯ ಕಾರ್ಯವ್ಯಖರಿಯ ಬಗ್ಗೆ ಹಾಗೂ ಮುಂದಿನ ಕಾರ್ಯಯೋಜನ ಬಗ್ಗೆ ಬೆಳಕು ಚೆಲ್ಲಿದರು.ಅನಿವಾಸಿಗಳು ನಿಸ್ವರ್ಥ ಪ್ರಯತ್ನ ಗ್ರಾಮದ ವಿದ್ಯಾರ್ಥಿಗಳು ಸದುಪಯೋಗ ಪಡಿಸಬೇಕೆಂದು ಕರೆ ನೀಡಿದರು.


ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ *ನನ್ನ ಮಗು ನನ್ನ ಭದ್ರತೆ ಎಂಬ ವಿಚಾರದಲ್ಲಿ ಡಾ.ರುಕ್ಸನ ಹಸನ್ phd ಮಾತನಾಡಿದರು. ತಮ್ಮ ಭಾಷಣದಲ್ಲಿ ದಾರಿ ತಪ್ಪುತ್ತಿರುವ ಮಕ್ಕಳ ಬಗ್ಗೆ ಪೋಷಕರೇ ಹೆಚ್ಚು ಜವಾಬ್ದಾರರು, ಮಕ್ಕಳ ದೈನಂದಿನ ಚಟುವಟಿಕೆಗಳನ್ನು ಪೋಷಕರು ಸದಾ ಗಮನಿಸಬೇಕು. ಡಿಜಿಟಲ್ ಇರದಲ್ಲಿ ಮಕ್ಕಳು ದಾರಿ ತಪ್ಪಲು ಹಲವಾರು ದಾರಿಗಳಿವೆ ಇಂತಹ ಸಂದರ್ಭದಲ್ಲಿ ನಮ್ಮ ಮಕ್ಕಳನ್ನು ಯಾವ ರೀತಿ ಭದ್ರತೆಯೊಂದಿಗೆ ಬೆಳಸಬೇಕು ಎಂದು ತಿಳಿಸಿಕೊಟ್ಟರು.

- Advertisement -


ಕಾರ್ಯಕ್ರಮದಲ್ಲಿ ಸೈಬರ್ ಕ್ರೈಂ ಹಾಗೂ ಕಾನೂನಿನ ಬಗ್ಗೆ ಮಾಹಿತಿಯನ್ನು ಮಂಗಳೂರು ಕ್ರೈಂ ಬ್ರಾಂಚ್ ಇದರ ಎಸಿಪಿಯಾದ ಗೀತಾ ಕುಲಕರ್ಣಿ ನೀಡಿದರು.


ಕಾರ್ಯಕ್ರಮದಲ್ಲಿ SSLC ಹಾಗೂ PUC ಯಲ್ಲಿ ಅತ್ಯಾದಿಕ ಅಂಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ವಿದ್ಯಾರ್ಥಿ ವೇತನವನ್ನು ನೀಡಲಾಯಿತು.
ಅದೇ ರೀತಿ ಕಮ್ಯೂನಿಟಿ ಸೆಂಟರ್ ನ ಕೌನ್ಸಿಲಿಂಗ್ ಮುಖಾಂತರ ಆಯ್ಕೆಯಾದ ಹಲವು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ Razak KMT, ಮನ್ಸೂರ್ ತೋಕೂರು, ಅಬ್ದುಲ್ ರಝಕ್ ನಂದ್ಯಾ, up ಇಬ್ರಾಹಿಂ, ap ಶರೀಫ್, ಅಬ್ದುಲ್ ಖಾದರ್ ಅಳಕೆ ಶರೀಫ್ GA , ಅನ್ವರ್ ಹುಸೇನ್ ,ಸೆಂಟ್ರಲ್ ಕಮಿಟಿಯ ಪದಾಧಿಕಾರಿಗಳು ಹಾಗೂ ಊರಿನ ಜಮಾಅತ್ ಮುಖ್ಯಸ್ಥರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದರು.


Acc ಯ ಕಾರ್ಯದರ್ಶಿ ಅಬ್ದುಲ್ ಖಾದರ್ ಸ್ವಾಗತಿಸಿ, ಇಬ್ರಾಹಿಂ ಅಳಕೆ ಧನ್ಯವಾದಗೈದು ಶಿಹಾಬ್ ನಡುಗುಡ್ಡೆ ಕಾರ್ಯಕ್ರಮವನ್ನು ನಿರೂಪಿಸಿದರು.



Join Whatsapp