ಲಡಾಖ್’ನಲ್ಲಿ 5 ಹೊಸ ಜಿಲ್ಲೆಗಳ ಸ್ಥಾಪನೆ: ಅಮಿತ್ ಶಾ ಘೋಷಣೆ

Prasthutha|

ನವದೆಹಲಿ: ಕೇಂದ್ರಾಡಳಿತ ಪ್ರದೇಶ ಲಡಾಖ್ ನಲ್ಲಿ ಐದು ಹೊಸ ಜಿಲ್ಲೆಗಳನ್ನು ಸ್ಥಾಪಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.

- Advertisement -


ಹೊಸ ಜಿಲ್ಲೆಗಳಿಗೆ ಝನ್ ಸ್ಕರ್, ದ್ರಾಸ್, ಶಾಮ್, ನುಬ್ರಾ ಮತ್ತು ಛಾಂಗ್ ಥಂಗ್ ಎಂದು ಹೆಸರಿಸಲಾಗುವುದು ಎಂದೂ ಹೇಳಿದ್ದಾರೆ.


ಈ ಸಂಬಂಧ ಎಕ್ಸ್/ಟ್ವಿಟರ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಅಭಿವೃದ್ಧಿ ಹೊಂದಿದ ಹಾಗೂ ಸಮೃದ್ಧ ಲಡಾಖ್ ನಿರ್ಮಿಸುವ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಂತೆ, ಕೇಂದ್ರಾಡಳಿತ ಪ್ರದೇಶದಲ್ಲಿ ಐದು ಹೊಸ ಜಿಲ್ಲೆಗಳನ್ನು ರಚಿಸಲು ಕೇಂದ್ರ ಗೃಹ ಸಚಿವಾಲಯ ತೀರ್ಮಾನಿಸಿದೆ. ಹೊಸ ಜಿಲ್ಲೆಗಳಾದ ಝನ್ ಸ್ಕರ್, ದ್ರಾಸ್, ಶಾಮ್, ನುಬ್ರಾ ಮತ್ತು ಛಾಂಗ್ ಥಂಗ್ ನ ಪ್ರತಿ ಮೂಲೆ ಮೂಲೆಗೂ ಆಡಳಿತವನ್ನು ವಿಸ್ತರಿಸುವ ಮೂಲಕ ಜನರ ಮನೆ ಬಾಗಿಲಿಗೆ ಸೌಲಭ್ಯಗಳನ್ನು ಒದಗಿಸಲಾಗುವುದು’ ಎಂದು ತಿಳಿಸಿದ್ದಾರೆ.

- Advertisement -

ಇದರಿಂದಾಗಿ ಲಡಾಖ್ನಲ್ಲಿ ಜಿಲ್ಲೆಗಳ ಸಂಖ್ಯೆ 7ಕ್ಕೆ ಏರಲಿದೆ. ಈವರೆಗೆ ಕಾರ್ಗಿಲ್ ಮತ್ತು ಲೇಹ್ ಮಾತ್ರವೇ ಇದ್ದವು.


ಇದೀಗ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ಅಲ್ಲಿನ 90 ವಿಧಾನಸಭಾ ಕ್ಷೇತ್ರಗಳಿಗೆ ಸೆಪ್ಟೆಂಬರ್ 18, 25 ಹಾಗೂ ಅಕ್ಟೋಬರ್ 1ರಂದು ಮತದಾನ ನಡೆಯಲಿದೆ. ಅಕ್ಟೋಬರ್ 4ರಂದು ಫಲಿತಾಂಶ ಪ್ರಕಟವಾಗಲಿದೆ.



Join Whatsapp