►‘ಬಿಜೆಪಿ ಪಟ್ಟಿಯಲ್ಲಿ 14 ಮುಸ್ಲಿಂ ಅಭ್ಯರ್ಥಿಗಳು’
ಜಮ್ಮು : ಮುಂದಿನ ತಿಂಗಳು ಜಮ್ಮು ಕಾಶ್ಮೀರದಲ್ಲಿ ನಡೆಯಲಿರುವ ವಿಧಾನಸಭಾ ಚುಣಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ 14 ಮುಸ್ಲಿಂ ಹೆಸರುಗಳೂ ಸೇರಿವೆ.
ಪುಲ್ವಾಮಾ ಜಿಲ್ಲೆಯ ರಾಜ್ಪೋರಾ ವಿಧಾನಸಭಾ ಕ್ಷೇತ್ರದಿಂದ ಅರ್ಷಿದ್ ಭಟ್, ಶೋಪಿಯಾನ್ ನಿಂದ ಜಾವೇದ್ ಅಹ್ಮದ್ ಖಾದ್ರಿ, ಅನಂತನಾಗ್ ಪಶ್ಚಿಮದಿಂದ ಮೊಹಮ್ಮದ್ ರಫೀಕ್ ವಾನಿ, ಅನಂತನಾಗ್ ನಿಂದ ಸೈಯದ್ ವಜಾಹತ್, ಕಿಶ್ತ್ವಾರ್ ವಿಧಾನಸಭೆ ಕ್ಷೇತ್ರದಿಂದ ಸುಶ್ರೀ ಶಗುನ್ ಪರಿಹಾರ್ ಮತ್ತು ದೋಡಾದಿಂದ ಗಜಯ್ ಸಿಂಗ್ ರಾಣಾ ಸ್ಪರ್ಧಿಸಲಿದ್ದಾರೆ.
ರಿಯಾಸಿ ಕ್ಷೇತ್ರದಿಂದ ಕುಲದೀಪ್ ರಾಜ್ ದುಬೆ, ಮಾತಾ ವೈಷ್ಣೋದೇವಿ ಕ್ಷೇತ್ರದಿಂದ ರೋಹಿತ್, ಪೂಂಚ್ ಹವೇಲಿ ಕ್ಷೇತ್ರದಿಂದ ಚೌಧರಿ ಅಬ್ದುಲ್ ಘನಿ, ಉಧಮ್ ಪುರ ಪಶ್ಚಿಮ ಕ್ಷೇತ್ರದಿಂದ ಪವನ್ ಗುಪ್ತಾ, ರಾಮಗಢ (ಎಸ್ ಸಿ ಮೀಸಲು) ಕ್ಷೇತ್ರದಿಂದ ಡಾ. ದೇವಿಂದರ್ ಕುಮಾರ್ ಮಣಿಯಾಲ್ ಹಾಗೂ ಅಖ್ನೂರ್ ಕ್ಷೇತ್ರದಿಂದ ಮೋಹನ್ ಲಾಲ್ ಭಗತ್ ಸ್ಪರ್ಧಿಸಲಿದ್ದಾರೆ.
ಒಟ್ಟು 90 ಕ್ಷೇತ್ರಗಳ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾವಣೆಯ ಅಧಿಸೂಚನೆಯನ್ನು ಈಚೆಗೆ ಚುನಾವಣಾ ಆಯೋಗವು ಪ್ರಕಟಿಸಿದೆ. ಸೆ.18ರಂದು 24 ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಸೆ. 25ರಂದು 2ನೇ ಹಂತ ಹಾಗೂ ಅ. 1ರಂದು ಮೂರನೇ ಮತ್ತು ಅಂತಿಮ ಹಂತದ ಚುನಾವಣೆ ನಡೆಯಲಿದೆ. ಅಕ್ಟೋಬರ್ 4ರಂದು ಫಲಿತಾಂಶ ಪ್ರಕಟವಾಗಲಿದೆ.
BJP announces list of candidates for the upcoming Jammu and Kashmir Assembly elections. (n/2) #JammuKashmirElections pic.twitter.com/j7TBPKVMNm
— Press Trust of India (@PTI_News) August 26, 2024