ಅರುಣ್ ಪುತ್ತಿಲ ಅವರದ್ದು ಎನ್ನಲಾದ ರಾಜಕೀಯ ಸಂಬಂಧಿ ಆಡಿಯೋ ವೈರಲ್..!

Prasthutha|

- Advertisement -

ಬಿಜೆಪಿ ವಲಯದಲ್ಲಿ ಭಾರೀ ಸಂಚಲನ

ಮಂಗಳೂರು: ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲ ಸಂಬಂಧಿತ ಸಂಭಾಷಣೆಯ ಆಡಿಯೋವೊಂದು ಸದ್ಯ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಉಂಟು ಮಾಡಿದೆ.

- Advertisement -

ಅದರಲ್ಲಿ ಮಹಿಳೆಯೊಂದಿಗೆ ಮಾತನಾಡಿರುವ ಪುತ್ತಿಲ ಬಿಜೆಪಿ ಸೇರ್ಪಡೆ ಮತ್ತು ರಾಜಕೀಯದ ಬಗ್ಗೆ ತೀರಾ ಕೆಟ್ಟದಾಗಿ ಮಾತನಾಡಿದ್ದಾರೆ. ಸದ್ಯ ಮಹಿಳೆ ಜೊತೆಗಿನ ಆಡಿಯೋ ಫುಲ್ ವೈರಲ್ ಆಗಿದ್ದು. ರಾಜ್ಯ ಬಿಜೆಪಿ ವಲಯದಲ್ಲಿ ಸಂಚಲನ ಮೂಡಿಸಿದೆ.

ವೈರಲ್ ಆಡಿಯೋದಲ್ಲಿ

ನೀವು ಬಿಜೆಪಿಗೆ ಸೇರಿದ್ದು ನಾಚಿಕೆ ಆಗಲಿಲ್ವ ಎಂದು ಮಹಿಳೆ ಕೇಳಿದ್ದಾಳೆ. ಇದಕ್ಕೆ ಉತ್ತರಿಸಿದ ಅರುಣ್ ಪುತ್ತಿಲ ಅವರದ್ದೆನ್ನಲಾದ ಧ್ವನಿಯಲ್ಲಿ ‘ರಾಜಕೀಯದಲ್ಲಿ ನಾಚಿಗೆ, ಹೇಸಿಗೆ ಥೂ ಅದೆಲ್ಲಾ ಇಲ್ಲ’ ಎಂದು ಹೇಳಿದ್ದಾರೆ.

ನಾಚಿಕೆ, ಹೇಸಿಗೆಯನ್ನೆಲ್ಲಾ ಬಿಟ್ಟವರೇ ಪೊಲಿಟೀಶಿಯನ್ ಎನಿಸಿಕೊಳ್ಳುತ್ತಾರೆ. ಮಾನ ಮರ್ಯಾದೆ ಎರಡು ಬಿಡದಿದ್ದರೇ ಉನ್ನತ ಹುದ್ದೆಗೆ ಹೋಗಲು ಸಾಧ್ಯವಿಲ್ಲ. ಅದನ್ನು ಬಿಟ್ಟು ಪರಿವಾರದ ಜನ ದೊಡ್ಡವರಾಗಿದ್ದಾರೆ. ಇನ್ನು ಪರಿವಾರದ ಜನ 3.5 ಕೋಟಿ ರೂ. ಹಣ ಪಡೆದಿದ್ದಾರೆ ಅನ್ನೊ ಬಗ್ಗೆಯೂ ಮಾತನಾಡಲಾಗಿದೆ. ಇದಕ್ಕೆ ಪ್ರತಿಯಾಗಿ ಮಹಿಳೆ ‘ಸೌಶಯಾತ್ಮಾವೀ ಇನಶ್ಯತೀ’ ಎಂಬ ಸಂಸ್ಕೃತ ಶ್ಲೋಕ ಹೇಳಿದ್ದಾಳೆ. ಅಂದರೆ, ಸಂಶಯ ಪಟ್ಟವನು ನಾಶವಾಗುತ್ತಾನೆ. ನೀವು ನಾಶ ಆದ್ರಿ ಎಂದು ಮಹಿಳೆ ಮಾತನಾಡಿದ್ದಾಳೆ.

ಅರುಣ್ ಪುತ್ತಿಲ ಅವರ ಹಣ ತೆಗೆದುಕೊಂಡಿದ್ದರ ಬಗ್ಗೆ ಪರೋಕ್ಷವಾಗಿ ಆಡಿಯೋದಲ್ಲಿ ಒಪ್ಪಿಕೊಂಡಿದ್ದಾರೆ. ಇನ್ನು ಬಿಜೆಪಿ ನಾಯಕಿ ನೀವು ಬೆಂಗಳೂರಿನಲ್ಲಿ ಒಂಟಿಯಾಗಿ ಸಿಕ್ಕಾಗ ಹೆಚ್ಚಿನ ವಿಚಾರವನ್ನು ಮಾತನಾಡುವುದಾಗಿ ಹೇಳಿದ್ದಾರೆ. ಈಗ ಆಡಿಯೋ ರೆಕಾರ್ಡ್ ಮಾಡಿ ನಿಮಗೆ ಇವತ್ತು ಕಡ್ಡಿ ಇಟ್ಟಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ.



Join Whatsapp