ಪಾಕಿಸ್ತಾನ: ಬಸ್ ಹೆದ್ದಾರಿಯಿಂದ ಕಂದರಕ್ಕೆ ಬಿದ್ದು ಕನಿಷ್ಠ 11 ಮಂದಿ ಸಾವು

Prasthutha|

ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಇಂದು ಬಸ್ಸೊಂದು ಹೆದ್ದಾರಿಯಿಂದ ಕಂದರಕ್ಕೆ ಬಿದ್ದಿದ್ದು, ಕನಿಷ್ಠ 11 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

- Advertisement -

70 ಜನರಿದ್ದ ಬಸ್ ಇರಾನ್‌ನಿಂದ ಪಂಜಾಬ್ ಪ್ರಾಂತ್ಯಕ್ಕೆ ಯಾತ್ರಾರ್ಥಿಗಳನ್ನು ವಾಪಸ್ ಕರೆತರುತ್ತಿದ್ದಾಗ ಹಬ್‌ನಲ್ಲಿ ಭೀ ಅಪಘಾತ ಸಂಭವಿಸಿದೆ. 11 ಮಂದಿ ಸಾವನ್ನಪ್ಪಿದ್ದಲ್ಲದೆ, 35 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಿಂಧ್ ಪ್ರಾಂತ್ಯದ ಕರಾಚಿಯಿಂದ ಬಲೂಚಿಸ್ತಾನ್ ಪ್ರಾಂತ್ಯದ ಗ್ವಾದರ್ ವರೆಗೆ ಪಾಕಿಸ್ತಾನದ ಅರಬ್ಬಿ ಸಮುದ್ರದ ಕರಾವಳಿಯುದ್ದಕ್ಕೂ ವಿಸ್ತರಿಸಿರುವ 653 ಕಿಮೀ ರಾಷ್ಟ್ರೀಯ ಹೆದ್ದಾರಿಯಾದ ಮಕ್ರಾನ್ ಕರಾವಳಿ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಹೆಚ್ಚಿನ ಪ್ರಯಾಣಿಕರು ಲಾಹೋರ್ ಅಥವಾ ಗುಜ್ರಾನ್‌ವಾಲಾದಿಂದ ಬಂದವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

- Advertisement -

ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ(ಡಿಸಿ) ಲಸ್ಬೆಲಾ ಹುಮೈರಾ ಬಲೋಚ್



Join Whatsapp