ಬಿಜೆಪಿ ಮಾಜಿ ಸಿಎಂ ಒಬ್ಬರ ಅಶ್ಲೀಲ ವಿಡಿಯೋ ಬಿಡುಗಡೆ ಆಗಲಿದೆ: ಆನಂದ‌ ನ್ಯಾಮಗೌಡ

Prasthutha|

ಬಾಗಲಕೋಟೆ: ಬಿಜೆಪಿಯ ಮಾಜಿ ಮುಖ್ಯಮಂತ್ರಿಯೊಬ್ಬರ ಅಶ್ಲೀಲ ವಿಡಿಯೋ ಇರುವ ಸಿಡಿ ಬಿಡುಗಡೆಯಾಗಲಿದೆ ಎಂದು ಮಾಜಿ ಶಾಸಕ ಆನಂದ‌ ನ್ಯಾಮಗೌಡ ಹೇಳಿದ್ದಾರೆ.

- Advertisement -

ಬಾಗಲಕೋಟೆಯ ಜಮಖಂಡಿ ‌ನಗರದಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಶನಿವಾರ ಮಾತನಾಡಿದ ಅವರು, ಇವತ್ತೊಂದು ಹೊಸ ಸುದ್ದಿ ಬಂದಿದೆ. ನೀವು ಕೇಳಿದ್ದೀರೋ ಇಲ್ಲವೋ ಗೊತ್ತಿಲ್ಲ. ಇವತ್ತೇ ಆ ಸುದ್ದಿ ಕೇಳಿದ್ದೇನೆ. ಅದೇನಪ್ಪಾ ಅಂದರೆ, ರಾಜ್ಯದ ಮಾಜಿ ಮುಖ್ಯಮಂತ್ರಿ ಅವರ ಒಂದು ಅಶ್ಲೀಲ‌ ಸಿಡಿ ಹೊರಗೆ ಬರೋದಿದೆ ಎಂದರು.

ಆ ಅಶ್ಲೀಲ‌ ಸಿಡಿ ಭಾರತೀಯ ಜನತಾ ಪಾರ್ಟಿಯವನದ್ದೇ. ಬಿಜೆಪಿ ಮಾಜಿ ‌ಮುಖ್ಯಮಂತ್ರಿಯ ಅಶ್ಲೀಲ ಸಿಡಿ ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಂದು ನ್ಯಾಮಗೌಡ ಹೇಳಿದ್ದಾರೆ.



Join Whatsapp