ಥೈಲೆಂಡ್ ನಲ್ಲಿ ವಿಮಾನ ಪತನ: 9 ಮಂದಿ ಸಾವು

Prasthutha|

ಥೈಲೆಂಡ್ ನಲ್ಲಿ ಪ್ರಯಾಣಿಕರ ಸಣ್ಣ ವಿಮಾನವೊಂದು ಪತನಗೊಂಡಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

- Advertisement -


ರಾಜಧಾನಿ ಬ್ಯಾಂಕಾಂಕ್ ನಿಂದ ಟೇಕ್ ಆಫ್ ಆಗಿ ಸ್ವಲ್ಪ ಸಮಯದ ಬಳಿಕ ಪತನಗೊಂಡಿದೆ. ಥಾಯ್ ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ವಿಮಾನ ನಿಲ್ದಾಣದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಮ್ಯಾಂಗ್ರೋವ್ ಜೌಗು ಪ್ರದೇಶದಲ್ಲಿ ವಿಮಾನದ ಅವಶೇಷಗಳು ಕಂಡುಬಂದಿವೆ.


ವಿಮಾನದಲ್ಲಿ 7 ಪ್ರಯಾಣಿಕರಿದ್ದರು, ಇಬ್ಬರು ಪೈಲಟ್ಗಳು ಇದ್ದರು, ವಿಮಾನದಲ್ಲಿದ್ದವರ ಗುರುತು ತಕ್ಷಣವೇ ಸ್ಪಷ್ಟವಾಗಿಲ್ಲ, ಆದರೆ ವಿಮಾನದಲ್ಲಿದ್ದವರಲ್ಲಿ ಹ್ಯಾಂಕಾಂಗ್ ಐವರು, ಚೀನೀ ಪ್ರವಾಸಿಗರು ಹಾಗೂ ಸಿಬ್ಬಂದಿ ಇದ್ದರು ಎಂದು ತಿಳಿದು ಬಂದಿದೆ.



Join Whatsapp