ಗಾಝಾ ಒಪ್ಪಂದ ಏರ್ಪಡಲು ಇಸ್ರೇಲ್ ಪ್ರಧಾನಿಯ ನಿಲುವೇ ಅಡ್ಡಿ: ಅಮೆರಿಕದ ನಿಯೋಗ

Prasthutha|

ದೋಹ : ಗಾಝಾ ಒಪ್ಪಂದ ಏರ್ಪಡಲು ಇಸ್ರೇಲ್ ಪ್ರಧಾನಿಯ ನಿಲುವು ನೆರವಾಗುವುದಿಲ್ಲ, ಅಡ್ಡಿಯಾಗಲಿದೆ ಎಂದು ಅಮೆರಿಕದ ನಿಯೋಗ ಹೇಳಿದೆ.

- Advertisement -

ಇಸ್ರೇಲ್ ಪ್ರಧಾನಿ ಬೆಂಜಮಿನ್ ಅವರ ಹೇಳಿಕೆಗಳಿಗೆ, ನಿಷ್ಠುರ ಮತ್ತು ರಾಜಿಯಾಗದ ನಿಲುವಾಗಿದೆ ಎಂದು ಗಾಝಾದಲ್ಲಿ ಕದನ ವಿರಾಮ ಒಪ್ಪಂದವನ್ನು ಅಂತಿಮಗೊಳಿಸಲು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್ ಕೈಗೊಂಡ ಮಧ್ಯಪ್ರಾಚ್ಯ ಪ್ರವಾಸದ ಸಂದರ್ಭ ಅವರ ಜತೆಗಿದ್ದ ನಿಯೋಗದ ಅಧಿಕಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಮಾಸ್ ದಾಳಿಯಲ್ಲಿ ಮೃತಪಟ್ಟವರ ಕುಟುಂಬದ ಜತೆಗಿನ ಮಾತುಕತೆಯ ಸಂದರ್ಭ ನೆತನ್ಯಾಹು `ಗಾಝಾ ಮತ್ತು ಈಜಿಪ್ಟ್ ನಡುವಿನ ಫಿಲಾಡೆಲ್ಫಿ ಕಾರಿಡಾರ್‍‌ನ ನಿಯಂತ್ರಣವನ್ನು ಉಳಿಸಿಕೊಳ್ಳಲು ಇಸ್ರೇಲ್ ಪಟ್ಟುಹಿಡಿಯುತ್ತದೆ ಎಂದು ಹೇಳಿರುವುದಾಗಿ ವರದಿಯಾಗಿದೆ. ಇದಕ್ಕೆ ಅಸಮಾಧಾನ ಹೊರಹಾಕಿದ ಅಮೆರಿಕದ ನಿಯೋಗ, ಇಸ್ರೇಲ್ ಪ್ರಧಾನಿಯ ಹೇಳಿಕೆಯನ್ನು ಗಮನಿಸಿದ್ದೇವೆ. ಆದರೆ ಈ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದಿಲ್ಲ. ಇಂತಹ ತಾಂತ್ರಿಕ ಸಮಸ್ಯೆಗಳನ್ನು ಮುಂದಿನ ಮಾತುಕತೆ ಸಂದರ್ಭ ಬಗೆಹರಿಸಬೇಕು ಎಂದಿದೆ.

- Advertisement -

ಕದನ ವಿರಾಮ ಒಪ್ಪಂದವನ್ನು ಅಂತಿಮಗೊಳಿಸುವುದು ಅಮೆರಿಕ ಮತ್ತು ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್ ಎದುರುಗಿರುವ ಏಕೈಕ ಗುರಿಯಾಗಿದೆ. ಕೆಲವು ತಾಂತ್ರಿಕ ವಿಷಯಗಳ ಬಗ್ಗೆ ಹೆಚ್ಚುವರಿ ಮಾತುಕತೆ ನಡೆಯಲಿದೆ. ಆದರೆ ಈ ರೀತಿ ಮಾಧ್ಯಮದ ಎದುರು ನೀಡುವ ಹೇಳಿಕೆ ಖಂಡಿತಾ ಒಪ್ಪಂದ ಪ್ರಕ್ರಿಯೆಗೆ ಪೂರಕವಾಗಿಲ್ಲ ಎಂದು ನಿಯೋಗದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಮಧ್ಯೆ, ಇಸ್ರೇಲ್ ಗಾಝಾದಿಂದ ತನ್ನ ಸೈನ್ಯವನ್ನು ಹಿಂದೆಗೆದುಕೊಳ್ಳುವ ವೇಳಾಪಟ್ಟಿ ಮತ್ತು ಸ್ಥಳವನ್ನು ಇಸ್ರೇಲ್ ಈಗಾಗಲೇ ಒಪ್ಪಿಕೊಂಡಿದೆ ಎಂದು ತಿಳಿಸಿದ ಆಂಟೊನಿ ಬ್ಲಿಂಕೆನ್, ಸಂಘರ್ಷ ಆರಂಭದಿಂದಲೂ ಗಾಝಾದ ಮೇಲೆ ಇಸ್ರೇಲ್‍ನ ದೀರ್ಘಾವಧಿಯ ಆಕ್ರಮಣವನ್ನು ಅಮೆರಿಕ ಒಪ್ಪಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಕದನ ವಿರಾಮ ಒಪ್ಪಂದದ ಎರಡೂ ಕಡೆಯವರು ಗರಿಷ್ಟ ಹೊಂದಾಣಿಕೆ ಪ್ರದರ್ಶಿಸಿದರೆ ಒಪ್ಪಂದ ಸಾಧ್ಯವಾಗಲಿದೆ. ಸಮಯ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.



Join Whatsapp