ಜೈಲಿನಿಂದಲೇ ಆಕ್ಸ್ ಫರ್ಡ್ ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸಿದ ಇಮ್ರಾನ್

Prasthutha|

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಬ್ರಿಟನ್ ನ ಪ್ರತಿಷ್ಠಿತ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಕುಲಪತಿಯಾಗಲು ಅರ್ಜಿ ಸಲ್ಲಿಸಿದ್ದಾರೆ. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಕಳೆದ ಒಂದು ವರ್ಷದಿಂದ ಜೈಲಿನಲ್ಲಿದ್ದಾರೆ.

- Advertisement -


ಭ್ರಷ್ಟಾಚಾರದಿಂದ ಹಿಡಿದು ಹಿಂಸಾಚಾರಕ್ಕೆ ಪ್ರಚೋದನೆ ನೀಡುವವರೆಗೆ ಅವರ ಮೇಲೆ ಆರೋಪವಿದೆ. ಆದರೆ, ತನ್ನ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತವಾಗಿದ್ದು, ತನ್ನನ್ನು ಅಧಿಕಾರದಿಂದ ದೂರವಿಡಲು ಈ ರೀತಿಯ ಟ್ರಿಕ್ ಬಳಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.


ಹಾಂಗ್ ಕಾಂಗ್ ನ ಕೊನೆಯ ಬ್ರಿಟಿಷ್ ಗವರ್ನರ್ ಕನ್ಸರ್ವೇಟಿವ್ ಪೀರ್ ಕ್ರಿಸ್ ಪ್ಯಾಟನ್ ಫೆಬ್ರವರಿಯಲ್ಲಿ ಆಕ್ಸ್ ಫರ್ಡ್ ನ ಚಾನ್ಸೆಲರ್ ಹುದ್ದೆಯಿಂದ ಕೆಳಗಿಳಿಯುವುದಾಗಿ ಘೋಷಿಸಿದರು.

- Advertisement -


ವಿಶ್ವವಿದ್ಯಾಲಯದ ವೆಬ್ಸೈಟ್ ಪ್ರಕಾರ, 10 ವರ್ಷಗಳ ಅವಧಿಯ ಅಭ್ಯರ್ಥಿಗಳ ಪಟ್ಟಿಯನ್ನು ಅಕ್ಟೋಬರ್ ವರೆಗೆ ಸಾರ್ವಜನಿಕಗೊಳಿಸಲಾಗುವುದಿಲ್ಲ. ಅಕ್ಟೋಬರ್ ಅಂತ್ಯದಲ್ಲಿ ಈ ಹುದ್ದೆಗೆ ಮತದಾನ ನಡೆಯಲಿದೆ.ಇಮ್ರಾನ್ 1975 ರಲ್ಲಿ ಆಕ್ಸ್ ಫರ್ಡ್ ನಿಂದ ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ಅವರು ಪಾಕಿಸ್ತಾನದ ಶ್ರೇಷ್ಠ ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾದರು.


ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಅನ್ನು ಸ್ಥಾಪಿಸಿದರು. ಇದಾದ ನಂತರ ಸೇನೆಯ ನೆರವಿನಿಂದ ಪಾಕಿಸ್ತಾನದ ಪ್ರಧಾನಿಯೂ ಆದರು, ಆದರೆ ಅವರೊಂದಿಗಿನ ವಿವಾದಗಳಿಂದಾಗಿ ಅವರು ಹುದ್ದೆಯಿಂದ ಕೆಳಗಿಳಿಯಬೇಕಾಯಿತು. 2005 ರಿಂದ 2014ರವರೆಗೆ ಬ್ರಾಡ್ಫೋರ್ಡ್ ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು.



Join Whatsapp