ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆ: ಮಲ್ಲೂರು ಗ್ರಾಮದ ಇಬ್ಬರು ವಿದ್ಯಾರ್ಥಿಗಳಿಗೆ ತೃತೀಯ ಸ್ಥಾನ

Prasthutha|

ಮೂಡಬಿದ್ರೆ : 17 ಆಗಸ್ಟ್ 2024 ರಂದು ಮೂಡಬಿದ್ರೆಯಲ್ಲಿ ಶೋರಿನ್ – ರ್ಯು ಕರಾಟೆ ಅಸೋಸಿಯೇಷನ್ ​​ಇಂಡಿಯಾ ನಡೆಸಿದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಗಾಣೆಮಾರ್ ಮಜ್ಲಿಸ್ ಪಬ್ಲಿಕ್ ಶಾಲೆಯ 4ನೇ ತರಗತಿ ವಿದ್ಯಾರ್ಥಿ ಮುಹಮ್ಮದ್ ನವೀದ್ ಹಾಗೂ 3ನೇ ತರಗತಿ ವಿದ್ಯಾರ್ಥಿ ಮುಹಮ್ಮದ್ ಸನಾನ್ ತೃತೀಯ ಸ್ಥಾನವನ್ನು ಗಳಿಸಿದ್ದಾರೆ.

- Advertisement -

ಮುಹಮ್ಮದ್ ನವೀದ್ ಮಲ್ಲೂರು ದೆಮ್ಮಲೆಯ ಅಬ್ದುಲ್ ಮಜೀದ್ ಬದ್ರಿಯಾ ಹಾಗೂ ನೌಶಿದಾ ಬಾನು ದಂಪತಿಗಳ ಪುತ್ರನಾಗಿರುತ್ತಾನೆ.
ಮುಹಮ್ಮದ್ ಸನಾನ್ ಮಲ್ಲೂರು ಬದ್ರಿಯಾನಗರದ ಇಮ್ರಾನ್ ಹಾಗೂ ಮಿಸ್ರಿಯಾ ದಂಪತಿಗಳ ಪುತ್ರನಾಗಿರುತ್ತಾನೆ.



Join Whatsapp