ಸ್ವಾತಂತ್ರ್ಯ ದಿನಾಚರಣೆಯಂದು ಮುಸ್ಲಿಂ ಜೋಡಿಯೊಂದು ಮದುವೆಯಾಗಿದ್ದು, ಈ ಮದುವೆ ನಡೆಯುತ್ತಿದ್ದ ವೇಳೆಯೇ ರಾಷ್ಟ್ರಗೀತೆಯ ಗಾಯನ ಕೇಳಿ ಬಂದಿದೆ.
ಕೂಡಲೇ ಹಾಲ್ ನಲ್ಲಿ ಸೇರಿದ್ದ, ಮದುವೆಗೆ ಬಂದಿದ್ದ ಎಲ್ಲರೂ ಎದ್ದು ನಿಂತು ರಾಷ್ಟ್ರಗೀತೆಗೆ ಗೌರವ ಸೂಚಿಸಿದ್ದಾರೆ.
ಮದುವೆ ವೇಳೆಯೇ ಸ್ವಾತಂತ್ರೋತ್ಸವ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆಯ ಗಾಯನ ಮೈಕ್ ನಲ್ಲಿ ಜೋರಾಗಿ ಕೇಳಿ ಬಂದಿದೆ. ಹೀಗಾಗಿ ಮದುವೆಯಲ್ಲಿ ಸೇರಿದ್ದ ಎಲ್ಲರೂ ಎದ್ದು ನಿಂತು ಗೌರವ ಸೂಚಿಸುತ್ತಿದ್ದಾರೆ. ಇದರ ವೀಡಿಯೊವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ಸ್ಟಾಗ್ರಾಮ್ ನಲ್ಲಿ ಈ ವೀಡಿಯೋ ಪೋಸ್ಟ್ ಆಗಿದ್ದು, ಲಕ್ಷಾಂತರ ಜನ ಈ ವೀಡಿಯೋ ವೀಕ್ಷಿಸಿ ನವ ಜೋಡಿಗೆ ಶುಭ ಹಾರೈಸುವ ಜೊತೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಆದರೆ ಇದು ಎಲ್ಲಿ ನಡೆದಿರುವ ಮದುವೆ ಎಂಬ ಉಲ್ಲೇಖ ವೀಡಿಯೋದಲ್ಲಿ ಇಲ್ಲ, ಆದರೆ ವೇಷಭೂಷಣ ನೋಡಿದರೆ ಇದು ಬಹುಶಃ ಕೇರಳದ ಮುಸ್ಲಿಂ ಸಮುದಾಯದಲ್ಲಿ ನಡೆದಿರುವ ಮದುವೆ ಎಂಬುದು ಖಚಿತವಾಗುತ್ತಿದೆ. ಜೊತೆಗೆ ಅನೇಕರು ಮಲೆಯಾಳಂ ಭಾಷೆಯಲ್ಲಿ ಈ ವೀಡಿಯೋಗೆ ಕಾಮೆಂಟ್ ಮಾಡಿದ್ದಾರೆ.
A post shared by Fork n knife journey (@fork_n_knife_journey)