ಬಿಹಾರ: ಭಾಗಲ್ಪುರದ ಸುಲ್ತಂಗಂಜ್ – ಅಗುವಾನಿ ಗಂಗಾ ನದಿಯ ಮೇಲೆ ನಿರ್ಮಾಣಗೊಳ್ಳುತ್ತಿರುವ ಚತುಷ್ಪಥ ಸೇತುವೆ ಶನಿವಾರ ಮೂರನೇ ಬಾರಿಗೆ ಕುಸಿದು ಗಂಗಾ ನದಿ ಪಾಲಾಗಿದೆ.
ಸುಲ್ತಂಗಂಜ್ ನಿಂದ ಅಗುವಾನಿ ಘಾಟ್ ಕಡೆಯ ಒಂಬತ್ತು ಮತ್ತು ಹತ್ತನೇ ಕಂಬಗಳ ನಡುವಿನ ಭಾಗವು ಕುಸಿದು ಬಿದ್ದಿದೆ. ಎಸ್. ಪಿ. ಸಿಂಗ್ಲಾ ಕಂಪನಿ ಕಳೆದ ಒಂಬತ್ತು ವರ್ಷಗಳಿಂದ ಈ ಸೇತುವೆ ನಿರ್ಮಾಣ ಕಾರ್ಯ ನಡೆಸುತ್ತಿದ್ದು. ಖಗರಿಯಾ ಮತ್ತು ಭಾಗಲ್ಪುರ್ ಜಿಲ್ಲೆಗಳನ್ನು ಸಂಪರ್ಕಿಸಲು ಭಾಗಲ್ಪುರ ಜಿಲ್ಲೆಯ ಸುಲ್ತಂಗಂಜ್ನಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗುತ್ತಿದೆ.
ಈ ಸೇತುವೆಯನ್ನು ಕಳೆದ 9 ವರ್ಷಗಳಿಂದ ನಿರ್ಮಾಣ ಮಾಡಲಾಗುತ್ತಿದ್ದು, ಇದೀಗ ಸೇತುವೆಯ ಒಂದು ಭಾಗದ ಮೇಲ್ಛಾವಣಿ ಕುಸಿದುಬಿದ್ದಿದೆ. ಅದೃಷ್ಟವಶಾತ್ ಈ ದುರ್ಘಟನೆಯಲ್ಲಿ ಯಾವುದೇ ಸಾವು-ನೋವುಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
अगुवानी सुल्तानगंज में गंगा पे निर्माणाधीन पुल फिर तीसरी बार गिरा ।पूरा system भ्रष्टाचार में लिप्त हैं ।मैं लगातार बोल रहा था कि फिर गिरेगा लेकिन आज तक किसी पे कोई कार्यवाही नहीं हुईं।ना अधिकारी पे ,ना एस.पी सिंघला कंपनी पे ,ना रोडिक कन्सल्टेंसी पे। @narendramodi @nitin_gadkari pic.twitter.com/HLnA3EkaXB
— Dr.Sanjeev Kumar MLA Parbatta,Bihar (@DrSanjeev0121) August 17, 2024