ಅಣೆಕಟ್ಟಿನ ಅಂಚಿನಲ್ಲಿ ನಿಂತು ಫೋಟೋ ಕ್ಲಿಕ್ಕಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

Prasthutha|

ಮಹಾರಾಷ್ಟ್ರ: ಅಣೆಕಟ್ಟಿನ ಅಂಚಿನಲ್ಲಿ ನಿಂತು ಯುವಕನೊಬ್ಬ ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋಗಿ ಕಾಲು ಜಾರಿ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

- Advertisement -


ಇಲ್ಲಿನ ಮಕರಧೋಕ್ಡಾ ಸರೋವರದ ಅಣೆಕಟ್ಟಿನ ಮೇಲೆ ಯುವಕ ನಿಂತು ಅಪಾಯಕಾರಿ ಸಾಹಸ ಮಾಡಲು ಮುಂದಾಗಿದ್ದಾನೆ. ಈ ವೇಳೆ ಕಾಲು ಜಾರಿ ನೀರಿಗೆ ಬಿದ್ದು ದುರಂತವಾಗಿ ಮುಳುಗಿ ಸಾವನಪ್ಪಿದ್ದಾನೆ.


ಈ ಭಯಾನಕ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.

- Advertisement -


ಅಣೆಕಟ್ಟಿನಂತೆ ಕಾಣುವ ಇಳಿಜಾರಿನ ಮೇಲ್ಭಾಗದಲ್ಲಿ ಮೂವರು ಹುಡುಗರು ನಿಂತು ನೃತ್ಯ ಮಾಡುತ್ತಿರುವುದು ಮತ್ತು ಕೆಲ ಹೊತ್ತಿನ ಬಳಿಕ ಅಣೆಕಟ್ಟಿನ ಅಂಚಿನ ಮೇಲೆ ನಿಂತಿದ್ದ ಯುವಕ ನಿಯಂತ್ರಣ ತಪ್ಪಿ ಬಿದ್ದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.



Join Whatsapp