ಗಾಂಧಿಜೀಗೆ ಅಪಮಾನ ಮಾಡಿರುವ ಹರೀಶ್ ಪೂಂಜ ದೇಶದ್ರೋಹಿ: ರಕ್ಷಿತ್ ಶಿವರಾಂ

Prasthutha|

►ಹರೀಶ್ ಪೂಂಜ ವಿರುದ್ಧ ದೇಶದ್ರೋಹದ ಕೇಸ್ ದಾಖಲಿಸಿ, ರೌಡಿಶೀಟರ್ ತೆರೆಯಲು ಆಗ್ರಹ

- Advertisement -

ಮಂಗಳೂರು : ಸ್ವಾತಂತ್ರ್ಯ ದಿನದಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ದೇಶದ್ರೋಹದ ಮಾತನಾಡಿದ್ದು, ಹರೀಶ್ ಪೂಂಜ ಒಬ್ಬ ದೇಶದ್ರೋಹಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ಹರೀಶ್ ಪೂಂಜ ಗಾಂಧಿಜೀಯ ಭಾವಚಿತ್ರಕ್ಕೆ ಪುಷ್ಪನಮನ ಮಾಡಿ ಅದೇ ವೇದಿಕೆಯ ಭಾಷಣದಲ್ಲಿ ಗಾಂಧಿಜೀಗೆ ಅಪಮಾನ ಮಾಡಿದ್ದಾರೆ, ಆ ಮೂಲಕ‌ ತನ್ನ ತಲೆಯಲ್ಲಿ ಬುದ್ಧಿ‌ ಇಲ್ಲ, ದ್ವೇಷದ ಲದ್ದಿ ಇದೆ ಎಂದು ನಿರೂಪಿಸಿದ್ದಾರೆ ಎಂದರು.

- Advertisement -

ಹರೀಶ್ ಪೂಂಜ ವಿರುದ್ಧ ನಾವು ದೂರು ಕೊಟ್ಟಿದ್ದೇವೆ ಎಂದು‌ ತಿಳಿಸಿದ ಅವರು, ದೇಶದ್ರೋಹದ ಸೆಕ್ಷನ್ ಅಡಿ ಶಾಸಕರ ಮೇಲೆ‌ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದರು. ಹರೀಶ್ ಪೂಂಜ ವಿರುದ್ಧ ಆರು ಕ್ರಿಮಿನಲ್ ಕೇಸ್ ದಾಖಲಾಗಿವೆ, ಅವರ ಮೇಲೆ‌ ಪೊಲೀಸರಿಗೆ ರೌಡಿಶೀಟರ್ ಓಪನ್ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ರಕ್ತರಹಿತ ಕ್ರಾಂತಿ ಮಾಡಿ ಅಹಿಂಸೆಯಿಂದ ಎಲ್ಲಾ ಸಾಧ್ಯ ಎಂದು ತೋರಿಸಿಕೊಟ್ಟಿರುವ ಗಾಂಧಿಜೀ, ಐನ್‌ಸ್ಟೈನ್, ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೆಲಾ ಮುಂತಾದ ಮಹನೀಯರಿಗೆ ಆದರ್ಶವಾಗಿದ್ದರು. ಗಾಂಧಿಜೀ ವಿಶ್ವಕ್ಕೆ ರೋಲ್ ಮಾಡಿಲ್ ಆಗಿದ್ದಾರೆ, ದೇಶಕ್ಕೆ ಒಬ್ಬನೇ ಮಹಾತ್ಮ, ಅದು ಗಾಂಧಿಜೀ ಎಂದು ರಕ್ಷಿತ್ ಶಿವರಾಂ ಹೇಳಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಪೂಂಜ ಅವರ ಪೂರ್ವಜರ ಪಾತ್ರ ಏನಿತ್ತು ಎಂದು ಪ್ರಶ್ನಿಸಿದ ಅವರು, ಸಂಘಪರಿವಾರಕ್ಕೆ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಒಬ್ಬ ಐಕಾನ್ ಅನ್ನು ಹುಡುಕಲು ಸಾಧ್ಯವಾಗಲಿಲ್ಲ ಎಂದರು. ಭಾರತದಲ್ಲಿ ಅಲ್ಪಸಂಖ್ಯಾತರನ್ನು ವಿರುದ್ಧವಾಗಿರುವ ಹರೀಶ್ ಪೂಂಜ ಬಾಂಗ್ಲಾದೇಶದ ಅಲ್ಪಸಂಖ್ಯಾತರ ಪರ ಇರುವುದು ಅವರ ದ್ವಂದ್ವ ನೀತಿ ಎಂದು‌ ರಕ್ಷಿತ್‌ ಶಿವರಾಂ‌ ಹೇಳಿದರು



Join Whatsapp