ಗಾಂಧಿಜೀಗೆ ಅಪಮಾನ | ಹರೀಶ್ ಪೂಂಜರಿಂದ‌ ದೇಶದ್ರೋಹದ ಕೃತ್ಯ: ರಮಾನಾಥ ರೈ ಆಕ್ರೋಶ

Prasthutha|

►ಹೊಂದಾಣಿಕೆ ರಾಜಕಾರಣದ ವಿರುದ್ಧವೂ ರಮಾನಾಥ ರೈ ಕೆಂಡ

- Advertisement -

ಮಂಗಳೂರು : ಸ್ವಾತಂತ್ರ್ಯ ದಿನಾಚರಣೆ ವೇಳೆ ಗಾಂಧಿಜೀ ಮತ್ತು ಸ್ವಾತಂತ್ರ ಹೋರಾಟಗಾರರನ್ನು ಅಪಮಾನಿಸುವ ರೀತಿಯಲ್ಲಿ‌‌ ಮಾತನಾಡಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ದೇಶದ್ರೋಹದ ಕೃತ್ಯ ಎಸಗಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರರನ್ನು ಅಪಮಾನಿಸುವುದು ದೇಶದ್ರೋಹದ ಕೆಲಸ ಎಂದರು. ಒಬ್ಬ ಚುನಾಯಿತ ಜನಪ್ರತಿನಿಧಿ ಸರಕಾರಿ ಕಾರ್ಯಕ್ರಮದಲ್ಲಿ ರಾಷ್ಟ್ರಪಿತ ಗಾಂಧಿಜೀಗೆ ಅಪಮಾನ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

- Advertisement -

ಈವರೆಗೆ ಯಾರೂ ಕೂಡ ಸ್ವಾತಂತ್ರ್ಯ ದಿನಾಚರಣೆ ವೇಳೆ ಸ್ವಾತಂತ್ರ್ಯ ಹೋರಾಟವನ್ನು ಹೋರಾಟಗಾರರನ್ನು ಅಪಮಾನ ಮಾಡಿರಲಿಲ್ಲ,. ರಾಷ್ಟ್ರಪಿತ ಗಾಂಧಿಜೀ ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ಅಪಮಾನಿಸಿರುವ ಹರೀಶ್ ಪೂಂಜ ವಿರುದ್ಧ ಸ್ವಯಂ ಪ್ರೇರಿತ ಕೇಸ್ ದಾಖಲಿಸಿ ಕಠಿಣ ಕಾನೂನು ಕೈಗೊಳ್ಳಬೇಕು ಎಂದು ಅವರು ಸರಕಾರ ಮತ್ತು ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.

ಮತೀಯ ವಿಚಾರದ ಕೆದಕುವುದು ಪೂಂಜ ಚಾಳಿ. ನೂರು ಕೋಟಿಗೂ ಅಧಿಕ ಹಿಂದೂಗಳಿರುವ ಭಾರತ ದೇಶದಲ್ಲಿ ಹಿಂದೂಗಳಿಗೆ ಅಪಾಯ ಎನ್ನುತ್ತಾ ಪ್ರಚೋದನೆ ಮಾಡಿದ್ದಾರೆ. ಹರೀಶ್ ಪೂಂಜ ದೊಡ್ಡ ಸಾಚಾ ಅಲ್ಲ, ಮತೀಯವಾಗಿ ಪ್ರಚೋದನೆ ಮಾಡುತ್ತಾ ಮುಸ್ಲಿಮರ ಜೊತೆ ವ್ಯಾಪಾರ ವಹಿವಾಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಹರೀಶ್ ಪೂಂಜ ಹೊಂದಾಣಿಕೆ ರಾಜಕೀಯದ ಮಾಡುತ್ತಿದ್ದಾರೆ ಎಂದು ಅವರು, ಹೊಂದಾಣಿಕೆಯ ರಾಜಕಾರಣದಿಂದಾಗಿ ಹರೀಶ್ ಪೂಂಜ ಅವರಿಗೆ ಕಾನೂನು ಕ್ರಮಗಳಿಂದ ರಕ್ಷಣೆ ಸಿಕ್ಕಿದೆ ಎಂದು ತಮ್ಮದೇ ಪಕ್ಷದ ನಾಯಕರ ವಿರುದ್ಧವೂ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಹೊಂದಾಣಿಕೆ ರಾಜಕಾರಣ ಮಾಡುವವರ ಮೇಲೆ ನಮ್ಮ‌ ಸರಕಾರ ಗಮನ‌ಹರಿಸಬೇಕು ಎಂದು ರಮನಾಥ ರೈ ಒತ್ತಾಯಿಸಿದರು. ಆರ್‌ಎಸ್‌ಎಸ್ ಮತ್ತು ಬಿಜೆಪಿಗೆ ಹೆದರುವವರು ಕಾಂಗ್ರೆಸ್‌ನಲ್ಲಿ ಇರಬೇಡಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಕಾಂಗ್ರೆಸಿಗರು ಹೊಂದಾಣಿಕೆ ರಾಜಕಾರಣ ಮಾಡದೆ ರಾಹುಲ್‌ಗಾಂಧಿ ಅವರ ಸಂದೇಶವನ್ನು ಪಾಲಿಸಬೇಕು ಎಂದು ಅವರು ಕರೆಕೊಟ್ಟರು.

ಬಾಂಗ್ಲಾದೇಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ದೇಶದಲ್ಲಿ ಅಲ್ಪಸಂಖ್ಯಾತರ ಹಿತ ಕಾಪಾಡುವುದು ಆಯಾ‌ ದೇಶಗಳ ಆಡಳಿತಗಾರರು ಮತ್ತು ಬಹುಸಂಖ್ಯಾತರ ಕರ್ತವ್ಯ ಎಂದರು. ಅಲ್ಪಸಂಖ್ಯಾತರ ಮತೀಯವಾದ ಅವರ ಸಮುದಾಯಕ್ಕೆ ಅಪಾಯ, ಬಹುಸಂಖ್ಯಾತ ಮತೀಯವಾದ ಆ ದೇಶಕ್ಕೆ ಅಪಾಯ ಎಂಬ ನೆಹರು ಮಾತನ್ನು ರಮಾನಾಥ ರೈ ನೆನಪಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಕೆಪಿಸಿಸಿ ಸದಸ್ಯ ಪೃಥ್ವಿರಾಜ್, ಮಾಜಿ ಮೇಯರ್ ಕೆ‌.‌ಅಶ್ರಫ್, ಪಾಲಿಕೆ ಸದಸ್ಯ ನವೀನ್ ಡಿಸೋಜಾ, ಜಿಲ್ಲಾ ಕಾಂಗ್ರೆಸ್ ಮುಖಂಡ ಶಬೀರ್ ಸಿದ್ದಕಟ್ಟೆ ಸೇರಿ ಇತರರು ಉಪಸ್ಥಿತಿ



Join Whatsapp