SDPI ಚೊಕ್ಕಬೆಟ್ಟು ಬೂತ್ ಸಮಿತಿ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ

Prasthutha|

- Advertisement -

ಮಂಗಳೂರು: ಎಸ್.ಡಿ.ಪಿ.ಐ ಚೊಕ್ಕಬೆಟ್ಟು ಬೂತ್ ಸಮಿತಿ ವತಿಯಿಂದ 78ನೇ ಸ್ವಾತಂತ್ರ್ಯದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವು ಎಸ್ಡಿಪಿಐ ಪಕ್ಷದ ಕಚೇರಿ ಮುಂಭಾಗ ನಡೆಯಿತು.

ಎಸ್ಡಿಪಿಐ ಚೊಕ್ಕಬೆಟ್ಟು ಬೂತ್ ಸಮಿತಿ ಅಧ್ಯಕ್ಷರಾದ ನವಾಜ್ ರವರ ಅಧ್ಯಕ್ಷತೆಯನ್ನು ವಹಿಸಿದರು. 5ನೇ ವಾರ್ಡ್ ಕಾರ್ಪೊರೇಟರ್ ಸಂಶಾದ್ ಅಬೂಬಕ್ಕರ್ ಧ್ವಜಾರೋಹಣಗೈದು ಸಂದೇಶ ಭಾಷಣ ಮಾಡಿದರು.

- Advertisement -

ಕಾರ್ಯಕ್ರಮದಲ್ಲಿ ಎಸ್.ಡಿ. ಪಿ.ಐ 5ನೇ ವಾರ್ಡ್ ಅಧ್ಯಕ್ಷರಾದ ಸಂಶುದ್ದೀನ್ ಕೃಷ್ಣಾಪುರ ಭಾಷಣ ಮಾಡಿದರು ಮುಖ್ಯ ಅತಿಥಿಯಾಗಿ ಆಗಮಿಸಿದ ಸುರತ್ಕಲ್ ಬ್ಲಾಕ್ ಅಧ್ಯಕ್ಷರು ನೌಶಾದ್ ಚೊಕ್ಕಬೆಟ್ಟು, 5ನೇ ವಾರ್ಡ್ ನ ಕಾರ್ಯದರ್ಶಿ ನವಾಜ್ ಚೊಕ್ಕಬೆಟ್ಟು, mjm ಮಸೀದಿ ಅಧ್ಯಕ್ಷರು ಅಝರ್ ಚೊಕ್ಕಬೆಟ್ಟು, mjm ಮಸೀದಿ ಉಸ್ತುವಾರಿ ಬಷೀರ್, ಉದ್ಯಮಿ ಇಬಾದುಲ್ಲಾ, WIM ಮಂಗಳೂರ್ ಅಸೆಂಬ್ಲಿಯ ಉಪಾಧ್ಯಕ್ಷರು ನಸೀಮಾ ಹಾಗೂ ಊರಿನ ಹಿರಿಯ ವ್ಯಕ್ತಿಗಳು, ನಾಗರಿಕರು, ಹಿತೈಷಿಗಳು, sdpi ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದ.ಕ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು,ಇಂಜಿನಿಯರಿಂಗ್ ಕಾಲೇಜು ಮತ್ತು ಲಾ ಕಾಲೇಜು ಮಾಡಿಸಿಕೊಡಬೇಕಾಗಿ ಬಿತ್ತಿಪತ್ರ ಪ್ರದರ್ಶಿಸಿದರು
ಕಾರ್ಯಕ್ರಮವನ್ನು ಸಮದ್ ಕಾಟಿಪಳ್ಳ ಸ್ವಾಗತಿಸಿ ವಂದಿಸಿದರು.



Join Whatsapp