ನಿರುದ್ಯೋಗ ಮೋದಿ ಸರ್ಕಾರಕ್ಕಿರುವ ದೊಡ್ಡ ಶಾಪ: ಮಲ್ಲಿಕಾರ್ಜುನ ಖರ್ಗೆ

Prasthutha|

ನವದೆಹಲಿ: ‘ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮೋದಿ ಸರ್ಕಾರವು ತನ್ನ ವೈಯಕ್ತಿಕ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ವಿಪರ್ಯಾಸ’ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

- Advertisement -


ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡ ಅವರು, ‘ಇರುವ ಕೆಲವೇ ಕೆಲವು ಉದ್ಯೋಗಗಳಿಗಾಗಿ ಲಕ್ಷಗಟ್ಟಲೆ ಜನರು ಬೀದಿಗಿಳಿದು ಕಷ್ಟಪಡುತ್ತಿದ್ದಾರೆ ಎನ್ನುವ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ. ಮುಂಬೈ ಪೊಲೀಸ್ ಇಲಾಖೆಯಲ್ಲಿದ್ದ 1,257 ಮಹಿಳಾ ಕಾನ್ಸ್ಟೆಬಲ್ ಹಾಗೂ ಮಹಿಳಾ ಕಾನ್ಸ್ಟೆಬಲ್ (ಚಾಲಕ) ಹುದ್ದೆಗಳಿಗೆ 1.11 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ನಿರುದ್ಯೋಗ ಮೋದಿ ಸರ್ಕಾರಕ್ಕಿರುವ ದೊಡ್ಡ ಶಾಪ’ ಎಂದು ಖರ್ಗೆ ಹೇಳಿದ್ದಾರೆ.


‘ಆತ್ಮಹತ್ಯೆ ತಡೆಗಾಗಿ ಗುಜರಾತ್ ವಜ್ರ ಕಾರ್ಮಿಕರ ಒಕ್ಕೂಟ ಜುಲೈ 15ರಂದು ಸಹಾಯವಾಣಿಯೊಂದನ್ನು ಆರಂಭಿಸಿತು. ಇದಕ್ಕೆ ಉದ್ಯೋಗ ಕಳೆದುಕೊಂಡು ಹತಾಶರಾದ 1600ಕ್ಕೂ ಹೆಚ್ಚು ಜನ ಕರೆ ಮಾಡಿದ್ದರು. ಸೂರತ್ ನಲ್ಲಿ ವಜ್ರ ತಯಾರಿಕಾ ಘಟಕ ತನ್ನ 50 ಸಾವಿರ ಉದ್ಯೋಗಿಗಳಿಗೆ 10 ದಿನ ರಜೆ ನೀಡಿ ಮನೆಗೆ ಕಳುಹಿಸಿದೆ. ಈಗ ಆರ್ಥಿಕ ಹಿಂಜರಿಕೆಯನ್ನು ಅನುಭವಿಸುತ್ತಿದೆ’ ಎಂದರು.



Join Whatsapp