ವಿಜಯಪುರ:ಜೈನ, ಸಿಖ್ ಧರ್ಮಿಯರಂತೆ ಲಿಂಗಾಯತ ಸಮಾಜದ ಎಲ್ಲ ಒಳ ಪಂಗಡಗಳಿಗೂ ಸೂಕ್ತ ಸ್ಥಾನಮಾನ, ಮೀಸಲಾತಿ ಸಿಗಬೇಕು ಎಂದು ಬೃಹತ್ ಕೈಗಾರಿಕಾ ಸಚಿವ ಎಂ .ಬಿ.ಪಾಟೀಲ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಸಮಾಜದ ಎಲ್ಲ ಉಪ ಪಂಗಡಗಳಿಗೆ ಒಂದೇ ಸೂರಿನಡಿ ರಾಜ್ಯ ಹಾಗೂ ಕೇಂದ್ರದಲ್ಲಿ ಮೀಸಲಾತಿ ಸಿಗಬೇಕು. ಒಕ್ಕಲಿಗರಿಗೆ ಸಿಕ್ಕ ಮಾದರಿಯಲ್ಲಿ ನಮಗೂ ಸಿಗಬೇಕು. ಆದರೆ ಒಕ್ಕಲಿಗರಿಗೆ ಸಿಕ್ಕಿದ್ದು ತಪ್ಪಲ್ಲ. ಅದಕ್ಕೆ ನಮ್ಮ ವಿರೋಧವಿಲ್ಲ ಎಂದು ಹೇಳಿದರು.
ಲಿಂಗಾಯತರಿಗೆ ಪ್ರತ್ಯೇ ಕ ಧರ್ಮದ ಮಾನ್ಯತೆ ಸಿಕ್ಕರೆ ಶಿಕ್ಷಣ ಹಾಗೂ ಉದ್ಯೋ ಗದಲ್ಲಿ ಹೆಚ್ಚಿನ ಅವಕಾಶಗಳು ಸಿಗುತ್ತಿದ್ದವು. ಕೆಪಿಎಸ್ಸಿ, ಯುಪಿಎಸ್ಸಿ, ವೈದ್ಯಕೀ ಯ ಹಾಗೂ ಇತರೆಡೆ ಅವಕಾಶ ಸಿಗತ್ತಿದ್ದವು. ಆದರೆ, ಪ್ರತ್ಯೇ ಕ ಲಿಂಗಾಯತ ಧರ್ಮದ ಮಾನ್ಯತೆ ಸಿಗುವುದರಿಂದ ಆಗುವ ಲಾಭದ ಕುರಿತು ಜನರು ಸರಿಯಾಗಿ ಅರ್ಥೈಸಿಕೊಳ್ಳಲಿಲ್ಲ ಎಂದು ಹೇಳಿದರು.