ಶೇಖ್ ಹಸೀನಾ ಈಗಲೂ ಬಾಂಗ್ಲಾದೇಶದ ಪ್ರಧಾನಿ: ಪುತ್ರ ಸಜೀಬ್ ವಾಝೆದ್

Prasthutha|

ಢಾಕಾ: ದೇಶಕ್ಕೆ ಮರಳಿ ವಿಚಾರಣೆಯನ್ನು ಎದುರಿಸಲು ನನ್ನ ತಾಯಿ ಸಿದ್ಧರಾಗಿದ್ದಾರೆ. ಬಾಂಗ್ಲಾದೇಶಕ್ಕೆ ಅವರು ಮರಳಿ ಬರುತ್ತಾರೆ. ಸರ್ಕಾರಿ ವಿರೋಧಿ ಪ್ರತಿಭಟನೆಗಳ ನಡುವೆ ಬಾಂಗ್ಲಾದೇಶ ತೊರೆಯುವ ಮೊದಲು ಹಸೀನಾ ಅಧಿಕೃತವಾಗಿ ರಾಜೀನಾಮೆ ನೀಡಲಿಲ್ಲ, ಅದಕ್ಕೆ ಅವಕಾಶ ಸಿಕ್ಕಿರಲಿಲ್ಲ. ಹಾಗಾಗಿ ಅವರು ಇನ್ನೂ ಬಾಂಗ್ಲಾದೇಶದ ಪ್ರಧಾನಿ. ಮುಂದಿನ ಚುನಾವಣೆಯಲ್ಲಿ ಅವಾಮಿ ಲೀಗ್ ಸ್ಪರ್ಧಿಸುತ್ತದೆ, ಗೆಲ್ಲುತ್ತದೆ ಎಂದು ಬಾಂಗ್ಲಾ ದೇಶದ ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರ ಪುತ್ರ ಪುತ್ರ ಸಜೀಬ್ ವಾಝೆದ್ ಹೇಳಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.

- Advertisement -

ನನ್ನ ತಾಯಿ ಯಾವುದೇ ತಪ್ಪನ್ನು ಮಾಡಿಲ್ಲ, ಅವರ ಸರ್ಕಾರದಲ್ಲಿ ಜನರು ಕಾನೂನುಬಾಹಿರ ಕೆಲಸಗಳನ್ನು ಮಾಡಿದ್ದಾರೆಂದರೆ ನನ್ನ ತಾಯಿ ಆದೇಶಿಸಿದರು ಎಂದು ಅರ್ಥವಲ್ಲ. ಅದಕ್ಕೆ ನನ್ನ ತಾಯಿ ಕಾರಣ ಅಲ್ಲ. ಈ ಪ್ರಕ್ಷುಬ್ಧತೆಗೆ ಯಾರು ಹೊಣೆಗಾರರೋ ಅವರನ್ನು ಮುಂದೆ ತರಬೇಕು ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರ ಪುತ್ರ ಪುತ್ರ ಸಜೀಬ್ ವಾಝೆದ್ ಹೇಳಿದ್ದಾರೆ.

ಪ್ರತಿಭಟನಾಕಾರರು ವಿದ್ಯಾರ್ಥಿಗಳಲ್ಲ, ರಾಷ್ಟ್ರವನ್ನು ಅಸ್ಥಿರಗೊಳಿಸಲು ಹೊರಟಿರುವ ಭಯೋತ್ಪಾದಕರು. ಈ ಭಯೋತ್ಪಾದಕರನ್ನು ನಿಗ್ರಹಿಸಲು ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಮನವಿ ಮಾಡುತ್ತೇನೆ ಎಂದು ವಾಝೆದ್ ಹೇಳಿದ್ದಾರೆ.



Join Whatsapp