ಬೆಳಗಾವಿ: ಬೆಂಕಿ ದುರಂತದಲ್ಲಿ ಮೃತ ಯುವಕನ ಕುಟುಂಬಕ್ಕೆ 18 ಲಕ್ಷ ಪರಿಹಾರ ನೀಡಿದ ಕಾರ್ಖಾನೆ ಆಡಳಿತ

Prasthutha|

ಬೆಳಗಾವಿ: ತಾಲೂಕಿನ ನಾವಗೆ ಬಳಿಯಲ್ಲಿ ಕಾರ್ಖಾನೆಗೆ ಬಿದ್ದ ಬೆಂಕಿಯಲ್ಲಿ ಮೃತ ಯುವಕನ ಮೂಳೆಗಳನ್ನು ಬ್ಯಾಗ್​ನಲ್ಲಿ ಹಾಕಿ ಕೊಟ್ಟಿದ್ದಕ್ಕೆ ಹೆತ್ತವರ ಕುಟುಂಬ ಅಸಮಾಧಾನ ಹೊರ ಹಾಕುತ್ತಿರಯವಾಗಲೇ ಅವರಿಗೆ ಕಾರ್ಖಾನೆ ಆಡಳಿತ ಮಂಡಳಿ 18 ಲಕ್ಷ ರೂ. ಪರಿಹಾರ ನೀಡಿದೆ.

- Advertisement -

ಆ.6ರಂದು ಜಿಲ್ಲೆಯ ನಾವಗೆ ಬಳಿಯ ಸ್ನೇಹಂ ಟೇಪಿಂಗ್ ಕಾರ್ಖಾನೆಯಲ್ಲಿ ನಡೆದಿದ್ದ ದುರ್ಘಟಯಲ್ಲಿ ಲಿಫ್ಟ್‌ನಲ್ಲಿ ಕಾರ್ಮಿಕ ಯಲ್ಲಪ್ಪ‌ ಗುಂಡ್ಯಾಗೋಳ ಸಜೀವದಹನವಾಗಿದ್ದರು. ಜಿಲ್ಲಾಡಳಿತಕ್ಕೂ ಮೊದಲು ಕಾರ್ಖಾನೆ ಆಡಳಿತ ಮಂಡಳಿ 18 ಲಕ್ಷ ರೂ. ಪರಿಹಾರ ನೀಡಿದೆ.

10 ಲಕ್ಷ ರೂ. ಪರಿಹಾರ ಬೇಡ ಅಂತಾ ಟಿವಿ9 ಮೂಲಕ ಮೃತನ ತಂದೆ ಸಣ್ಣಯಲ್ಲಪ್ಪ ಅಳಲು ತೋಡಿಕೊಂಡಿದ್ದರು. ಬಳಿಕ 18 ಲಕ್ಷ ರೂ. ಪರಿಹಾರದ ಚೆಕ್​ವನ್ನು ತಂದೆ ಸಣ್ಣಯಲ್ಲಪ್ಪ, ತಾಯಿ ಬಸವ್ವ ಹೆಸರಿನಲ್ಲಿ ಪರಿಹಾರದ ಚೆಕ್​ ಅನ್ನು ಸ್ನೇಹಂ ಟೇಪಿಂಗ್ ಕಾರ್ಖಾನೆ ವಿತರಣೆ ಮಾಡಿದೆ.

- Advertisement -

ಮನೆಯ ಜವಾಬ್ದಾರಿಯನ್ನು ಹೊತ್ತಿದ್ದ ಯುವಕ ಅಕ್ಕನ ಮದುವೆ ಮಾಡಿ ಇನ್ನಿಬ್ಬರ ಸಹೋದರಿಯರ‌ ಓದಿನ ಜವಾಬ್ದಾರಿಯನ್ನೂ ತೆಗೆದುಕೊಂಡಿದ್ದ ಯಲ್ಲಪ್ಪ ಸಜೀವವಾಗಿ ಸುಟ್ಟು ಹೋಗಿದ್ದರು. ಬೆಂಕಿಯ ಕೆನ್ನಾಲಿಗೆಗೆ ಯಲ್ಲಪ್ಪನ ದೇಹ ಸಂಪೂರ್ಣ ಸುಟ್ಟು ಕರಕಲಾಗಿ ಕೇವಲ ಮೂಳೆಗಳು ಮಾತ್ರ ಉಳಿದ್ದಿದ್ದವು.



Join Whatsapp