ಬ್ರೆಝಿಲ್: ನೆಲಕ್ಕೆ ಅಪ್ಪಳಿಸಿದ ವಿಮಾನ, ಸಿಬ್ಬಂದಿ ಸೇರಿ ಎಲ್ಲ ಪ್ರಯಾಣಿಕರೂ ಮೃತ

Prasthutha|

ಬ್ರೆಝಿಲ್: ವಾಯುಮಾರ್ಗದಿಂದ ನೆಲದ ಮೇಲೆ ವಿಮಾನ ಅಪ್ಪಳಿಸಿ ವಿಮಾನದಲ್ಲಿದ್ದ ಎಲ್ಲಾ 62 ಮಂದಿ ಮೃತಪಟ್ಟಿರುವ ಆಘಾತಕಾರಿ ಘಟನೆ ಬ್ರೆಝಿಲ್‌ನಲ್ಲಿ ಶುಕ್ರವಾರ ಸಂಭವಿಸಿದೆ.

- Advertisement -

62 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಪ್ರಾದೇಶಿಕ ಟರ್ಬೊಪ್ರೊಪ್ ವಿಮಾನವು ಶುಕ್ರವಾರ ಬ್ರೆಜಿಲ್‌ನ ಸಾವೊ ಪಾಲೊ ಬಳಿ ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದವರೆಲ್ಲರೂ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

58 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯನ್ನು ಹೊತ್ತೊಯ್ದು ಸಾವೊ ಪಾಲೊದ ಗೌರುಲ್ಹೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವಿಮಾನ ಅಪಘಾತಕ್ಕೀಡಾಗಿದೆ ಎಂದು ಏರ್‌ಲೈನ್ ವೊಪಾಸ್ ಹೇಳಿಕೆಯಲ್ಲಿ ದೃಢಪಡಿಸಿದೆ.

- Advertisement -

ವಿಮಾನ ನೆಲಕ್ಕೆ ಅಪ್ಪಳಿಸುವ ದೃಶ್ಯ ಸೆರೆಯಾಗಿದ್ದು, ಆಘಾತಕಾರಿ ದುರಂತದ ವೀಡಿಯೋ ವೈರಲ್ ಆಗಿದೆ.

ವಿಮಾನ ದುರಂತಕ್ಕೆ ಕಾರಣ ತಿಳಿದಿಲ್ಲ.



Join Whatsapp