ವಕ್ಫ್ ಮಸೂದೆ ಪರಿಶೀಲನೆಗೆ ಜಂಟಿ‌ ಸದನ ಸಮಿತಿ ರಚನೆ

Prasthutha|

ಒವೈಸಿ, ತೇಜಸ್ವಿ ಸೂರ್ಯ, ವೀರೇಂದ್ರ ಹೆಗ್ಗಡೆ ಸೇರಿ 31 ಸದಸ್ಯರು

- Advertisement -

ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆ ಪರಿಶೀಲನೆಗೆ ಜಂಟಿ ಸಂಸದೀಯ ಸಮಿತಿ ರಚನೆ ಆಗಲಿದೆ. ಸಮಿತಿ (ಜೆಪಿಸಿ) ರಚಿಸುವ ಪ್ರಸ್ತಾವನೆಯನ್ನು ಲೋಕಸಭೆ ಅಂಗೀಕರಿಸಿದೆ.

ಸಮಿತಿಗೆ ಲೋಕಸಭೆಯಿಂದ 21 ಮತ್ತು ರಾಜ್ಯಸಭೆಯಿಂದ 10 ಸದಸ್ಯರನ್ನು ಒಳಗೊಂಡ 31 ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ರಾಜ್ಯ ಸಭಾ ಸದಸ್ಯ ವೀರೇಂದ್ರ ಹೆಗಡೆ ಸದಸ್ಯರಲ್ಲಿ ಸೇರಿದ್ದಾರೆ.

- Advertisement -

ಸಮಿತಿಗೆ ಲೋಕಸಭೆಯಿಂದ 21 ಸದಸ್ಯರನ್ನು ಸೂಚಿಸಲಾಗಿದ್ದು, ಇದರಲ್ಲಿ ಬಿಜೆಪಿಯ 7 ಹಾಗೂ ಕಾಂಗ್ರೆಸ್‌ನ 3 ಮಂದಿ ಸದಸ್ಯರಿದ್ದಾರೆ. 1. ಜಗದಾಂಬಿಕಾ ಪಾಲ್ (ಬಿಜೆಪಿ) 2. ನಿಶಿಕಾಂತ್ ದುಬೆ (ಬಿಜೆಪಿ) 3. ತೇಜಸ್ವಿ ಸೂರ್ಯ (ಬಿಜೆಪಿ) 4. ಅಪರಾಜಿತಾ ಸಾರಂಗಿ (ಬಿಜೆಪಿ) 5. ಸಂಜಯ್ ಜೈಸ್ವಾಲ್ (ಬಿಜೆಪಿ) 6. ದಿಲೀಪ್ ಸೈಕಿಯಾ (ಬಿಜೆಪಿ) 7. ಅಭಿಜಿತ್ ಗಂಗೋಪಾಧ್ಯಾಯ 8 ಶ್ರೀಮತಿ ಡಿಕೆ ಅರುಣಾ (ವೈಎಸ್‌ಆರ್‌ಸಿಪಿ) 9. ಗೌರವ್ ಗೊಗೊಯ್ (ಕಾಂಗ್ರೆಸ್) 10. ಇಮ್ರಾನ್ ಮಸೂದ್ (ಕಾಂಗ್ರೆಸ್) 11. ಮುಹಮ್ಮದ್ ಜಾವೇದ್ (ಕಾಂಗ್ರೆಸ್) 12. ಮೌಲಾನಾ ಮೊಹಿಬುಲ್ಲಾ (ಎಸ್‌ಪಿ) 13. ಕಲ್ಯಾಣ್ ಬ್ಯಾನರ್ಜಿ (ಟಿಎಂಸಿ) 14. ಎ ರಾಜಾ (ಡಿಎಂಕೆ) ಎಲ್.ಎಸ್.ದೇವರಾಯು (ಟಿಡಿಪಿ) 16. ದಿನೇಶ್ವರ್ ಕಾಮತ್ (ಜೆಡಿಯು) 17. ಅರವಿಂದ್ ಸಾವಂತ್ (ಶಿವಸೇನೆ, ಉದ್ಧವ್ ಬಣ) 18. ಸುರೇಶ್ ಗೋಪಿನಾಥ್ (ಎನ್‌ಸಿಪಿ, ಶರದ್ ಪವಾರ್) 19. ನರೇಶ್ ಗಣಪತ್ ಮ್ಹಾಸ್ಕೆ (ಶಿವಸೇನೆ, ಶಿಂಧೆ ಬಣ) 20. (LJP-R) 21. ಅಸಾದುದ್ದೀನ್ ಒವೈಸಿ (AIMIM)

ರಾಜ್ಯಸಭೆಯಿಂದ 10 ಮಂದಿ ಸದಸ್ಯರಲ್ಲಿ ಬಿಜೆಪಿಯ 4 ಹಾಗೂ ಕಾಂಗ್ರೆಸ್‌ ಒಬ್ಬ ಸದಸ್ಯರಿದ್ದಾರೆ. ಬಿಜೆಪಿಯಿಂದ ಬ್ರಿಜ್ ಲಾಲ್, ಡಾ. ಮೇಧಾ ವಿಶ್ರಮ ಕುಲಕರ್ಣಿ, ಗುಲಾಂ ಅಲಿ, ಡಾ. ರಾಧಾ ಮೋಹನ್ ದಾಸ್ ಅಗರ್ವಾಲ್.

ಕಾಂಗ್ರೆಸ್‌ನಿಂದ ಸೈಯದ್ ನಾಸೀರ್ ಹುಸೇನ್.

ರಾಷ್ಟ್ರಪತಿ ನಾಮ ನಿರ್ದೇಶಿತ ಸಂಸದ ಡಾ.ವೀರೇಂದ್ರ ಹೆಗ್ಗಡೆ,
ಟಿಎಂಸಿಯ ಮುಹಮ್ಮದ್ ನದೀಮುಲ್ ಹಕ್, ವೈಎಸ್‌ಆರ್‌ಸಿಪಿಯ ವಿ. ವಿಜಯಸಾಯಿ ರೆಡ್ಡಿ, ಡಿಎಂಕೆಯ ಎಂ. ಮುಹಮ್ಮದ್ ಅಬ್ದುಲ್ಲಾ, ಆಪ್‌ನ ಸಂಜಯ್ ಸಿಂಗ್.



Join Whatsapp