ವಿನೇಶ್ ಅನರ್ಹ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಆಘಾತ: ಅಂತಿಮ್’ಗೆ ಗಡಿಪಾರು ಭೀತಿ

Prasthutha|

ಪ್ಯಾರಿಸ್: ಒಲಿಂಪಿಕ್ಸ್ ನಿಂದ ಅನರ್ಹಗೊಂಡು ವಿನೇಶ್ ಫೋಗಟ್ ಕುಸ್ತಿಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಮತ್ತೊಬ್ಬರು ಭಾರತೀಯ ಕುಸ್ತಿಪಟುವನ್ನು ಪ್ಯಾರಿಸ್ ನಿಂದ ಗಡಿಪಾರು ಮಾಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.

- Advertisement -


ನಿಯಮ ಉಲ್ಲಂಘಿಸಿ ಅಧಿಕೃತ ಮಾನ್ಯತೆಗಳನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಕುಸ್ತಿಪಟು ಅಂತಿಮ್ ಪಂಘಲ್ ಅವರು ಪ್ಯಾರಿಸ್ ಒಲಿಂಪಿಕ್ಸ್ ನಿಂದ ಗಡಿಪಾರು ಭೀತಿ ಎದುರಿಸುತ್ತಿದ್ದಾರೆ.


ತಮಗೆ ಸೇರಿದ ವಸ್ತುಗಳನ್ನು ಒಲಿಂಪಿಕ್ಸ್ ಕ್ರೀಡಾ ಗ್ರಾಮದಿಂದ ತೆಗೆದುಕೊಂಡು ಬರುವಂತೆ ಹೇಳಿ ಅಂತಿಮ್ ತಮ್ಮ ಸಹೋದರಿಯನ್ನು ಕ್ರೀಡಾ ಗ್ರಾಮಕ್ಕೆ ಕಳುಹಿಸಿದ್ದರು. ಈ ವೇಳೆ ಅಧಿಕೃತ ಮಾನ್ಯತೆಗಳನ್ನು ಸಹೋದರಿ ಕೈಗೆ ಕೊಟ್ಟಿದ್ದರು. ಕ್ರೀಡಾ ಗ್ರಾಮದಿಂದ ಹೊರ ಹೋಗುವ ವೇಳೆ ಸಹೋದರಿ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ನಿಯಮ ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದೆ.

- Advertisement -


ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದ ಭದ್ರತಾ ಸಿಬ್ಬಂದಿ ಅಂತಿಮ್ ಅವರ ಸಹೋದರಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ತದನಂತರ ಅಂತಿಮ್ ಅವರನ್ನು ಕರೆದು ಹೇಳಿಕೆ ಪಡೆದಿದ್ದಾರೆ.


‘ನಾವು ಬೆಂಕಿಯ ಜೊತೆ ಸರಸವಾಡುತ್ತಿದ್ದೇವೆ’ ಎಂದು ಈ ವಿಚಾರವಾಗಿ ಐಒಎ(ಭಾರತೀಯ ಒಲಿಂಪಿಕ್ಸ್ ಸಂಸ್ಥೆ) ಹೇಳಿದೆ.



Join Whatsapp