ಕಾಳಿ ನದಿ ಹಳೆ ಸೇತುವೆ ಕುಸಿತ: ಹೊಸ ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರ ನಿಷೇಧ

Prasthutha|

ಕಾರವಾರ: ಕಾರವಾರದ ಕೋಡಿಭಾಗ್ ಬಳಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹಳೆ ಸೇತುವೆ ಕುಸಿದು ಬಿದ್ದಿದೆ. ಈ ಹಿನ್ನೆಲೆ ಹೊಸ ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

- Advertisement -


ಕಾರವಾರ ಹಾಗೂ ಗೋವಾಗೆ ಸಂಪರ್ಕ ಕಲ್ಪಿಸುವಂತೆ ಕಾಳಿ ನದಿಗೆ 41 ವರ್ಷದ ಹಿಂದೆ ಸೇತುವೆ ಕಟ್ಟಲಾಗಿತ್ತು. ಈ ಸೇತುವೆ ಹಳೆಯದಾದ ಹಿನ್ನೆಲೆ ಪಕ್ಕದಲ್ಲೇ ಮತ್ತೊಂದು ಹೊಸ ಸೇತುವೆ ಕಟ್ಟಲಾಗಿದೆ. ಇದೀಗ ಹಳೆ ಸೇತುವೆ ಕುಸಿದಿದ್ದು ಹೊಸ ಸೇತುವೆ ಮೇಲೂ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

ಪೊಲೀಸ್ ಇಲಾಖೆ ಹೊಸ ಸೇತುವೆ ಮೇಲೆ ಲಘು ವಾಹನಗಳ ಓಡಾಟಕ್ಕೆ ಮಾತ್ರ ಅವಕಾಶ ಕೊಡ್ತಿದ್ದಾರೆ. ಭಾರೀ ವಾಹನಗಳ ಸಂಚಾರ ನಿಷೇಧ ಹಿನ್ನಲೆ ಅಂಕೋಲಾದ ಹಟ್ಟಿಕೇರಿ ಟೋಲ್ಗೇಟ್ ಬಳಿ ಸರಕು ವಾಹನಗಳಿಗೆ ತಡೆ ಹಿಡಿಯಲಾಗುತ್ತಿದೆ. ವಾಹನ ದಟ್ಟಣೆ ಉಂಟಾಗದಂತೆ ಸರಕು ವಾಹನಗಳನ್ನ ತಡೆದು ನಿಲ್ಲಿಸಲಾಗುತ್ತಿದೆ. ಗೋವಾ ಮಾರ್ಗಕ್ಕೆ ತೆರಳುವ ಭಾರೀ ವಾಹನಗಳಿಗೆ ಟೋಲ್ನಲ್ಲೇ ತಡೆದು ಪೊಲೀಸರು ನಿಲ್ಲಿಸುತ್ತಿದ್ದಾರೆ.



Join Whatsapp