ಪೋಕ್ಸೊ ಕೇಸ್ ಇರುವ ಯಡಿಯೂರಪ್ಪಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ?: ಸಿಎಂ ಸಿದ್ದರಾಮಯ್ಯ

Prasthutha|

ಮೈಸೂರು: ಈ ವಯಸ್ಸಿನಲ್ಲಿ ಪೋಕ್ಸೊ ಕೇಸ್ ಎದುರಿಸುತ್ತಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಅವರ ಕಾಲದಲ್ಲಿ ಆಗಿರುವ ಹಗರಣಗಳನ್ನೆಲ್ಲಾ ಆ.9ರಂದು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಬಿಚ್ಚುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

- Advertisement -


‘ಪಾದಯಾತ್ರೆ ಮುಗಿಯುವಷ್ಟರಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು’ ಎಂಬ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆಗೆ ಬುಧವಾರ ಇಲ್ಲಿ ತಿರುಗೇಟು ನೀಡಿದರು.


‘ಯಡಿಯೂರಪ್ಪ ಪೋಕ್ಸೊ ಕೇಸ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದು, ದೋಷಾರೋಪಪಟ್ಟಿಯನ್ನೂ ಹಾಕಲಾಗಿದೆ. ನ್ಯಾಯಾಲಯದ ದಯೆಯಿಂದಾಗಿ ಅವರು ಬದುಕಿದ್ದಾರೆ; ಜೈಲಿಗೆ ಹೋಗಿಲ್ಲ. ಆ ಕೇಸ್ ನಲ್ಲಿ ಜಾಮೀನೇ ಸಿಗುವಂತಿಲ್ಲ. ಅಂಥವರಿಗೆ ನನ್ನ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ? ಈ ವಯಸ್ಸಿನಲ್ಲಿ (82) ಪೋಕ್ಸೊ ಕೇಸ್ ನಲ್ಲಿ ಸಿಲುಕಿದ್ದಾರೆಂದರೇನು? ನೀವು (ಮಾಧ್ಯಮದವರು) ಅದನ್ನು ಜಾಸ್ತಿ ತೋರಿಸುವುದಿಲ್ಲ. ಅವರು ಸಾರ್ವಜನಿಕ ಜೀವನದಿಂದಲೇ ನಿವೃತ್ತಿಯಾಗಬೇಕು’ ಎಂದು ಹೇಳಿದರು.



Join Whatsapp